ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಸಮೀಪ ಟಿಪ್ಪರ್ ಕ್ವಾರಿಗೆ ಬಿದ್ದು ನಜ್ಜುಗುಜ್ಜಾಗಿರುವುದು. 
ಚಾಮರಾಜನಗರ

ಟಿಪ್ಪರ್ ಮಗುಚಿ ಚಾಲಕ ಮೃತ

ಅಭಿನಯ್ ಎಚ್.ಎಂ
ಗುಂಡ್ಲುಪೇಟೆ: ತಾಲೂಕಿನ ಗರಗನಹಳ್ಳಿ ಸಮೀಪ ಬಿಳಿಕಲ್ಲು ತುಂಬಿದ್ದ ಟಿಪ್ಪರ್ 50 ಅಡಿ ಆಳಕ್ಕೆ ಬಿದ್ದು ಚಾಲಕ ಮೃತಪಟ್ಟಿದ್ದಾನೆ.
ದೊಡ್ಡಬಳ್ಳಾಪುರ ಮೂಲದ ರಾಜು ಅವರ ಪುತ್ರ ಸುಬ್ಬು(35) ಮೃತ ಚಾಲಕ. ಉದ್ಯಮಿ ಮಧು ಅವರಿಗೆ ಸೇರಿದ ಕ್ವಾರಿಯಿಂದ ಕಲ್ಲನ್ನು ಮೇಲೆ ಸಾಗಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ 50 ಅಡಿ ಆಳಕ್ಕೆ ಬಿದ್ದಿದೆ. ಈ ಬಗ್ಗೆ ಪಟ್ಟಣ ಪೊಲೀಸರು ಮೃತದೇಹವನ್ನು ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದರು. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ.
ಫೋಟೋ