ಗುಂಡ್ಲುಪೇಟೆ ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಭೀಮ ಹೆಸರಿನ ಹುಲಿ ಪ್ರವಾಸಿಗರಿಗೆ ಭರಪೂರ ದರ್ಶನ ನೀಡಿದೆ.
ಗುಂಡ್ಲುಪೇಟೆ : ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಬಂಡೀಪುರದಲ್ಲಿ ಭಾನುವಾರ ಹುಲಿ ದಿನವಿಡೀ ಭರಪೂರ ದರ್ಶನ ನೀಡಿದೆ.
ಭಾನುವಾರ ಬೆಳಗ್ಗೆ ಸಫಾರಿ ವಲಯದ ನಂಜಾಪುರ ಕೆರೆಯ ನೀರಿನಲ್ಲಿ ಕಾಣಿಸಿಕೊಂಡ ಭೀಮ ಹೆಸರಿನ ಗಂಡು ಹುಲಿ ಸಂಜೆಯಯವರೆಗೂ ಮಲಗಿರುವ ದೃಷ್ಯ ಪ್ರವಾಸಿಗರಿಗೆ ರಸದೌತಣ ನೀಡಿದೆ. ಬೆಳಗ್ಗೆ ಹುಲಿದರ್ಶನ ನೀಡಿದ ವಿಷಯ ತಿಳಿದು ಮಧ್ಯಾಹ್ನವೂ ಅತ್ತಲೇ ಹೋಗಿದ್ದ ಪ್ರವಾಸಿಗರು ತಮ್ಮ ಕ್ಯಾಮರಾ ಮತ್ತು ಮೊಬೈಲುಗಳಲ್ಲಿ ಫೋಟೋ ವಿಡಿಯೋ ಸೆರೆಹಿಡಿದು ಸಂಭ್ರಮಿಸಿದರು.
ದಿನಗಟ್ಟಲೆ ನೀರಿನಲ್ಲಿ ಮಲಗಿ ಹೊರಳಾಡುತ್ತಿದ್ದ ಹುಲಿಯನ್ನು ಪ್ರವಾಸಿಗರು ಸಾಕು ಸಾಕೆನಿ ಸುವಷ್ಟು ಕಣ್ತುಂಬಿಸಿಕೊಂಡರು. ಇದರ ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಬಹುಷಃ ಕಾಡೆಮ್ಮೆಯಂಥಾ ಭರ್ಜರಿ ಪ್ರಾಣಿಯನ್ನು ಬೇಟೆಯಾಡಿದ ಹುಲಿ ಹೊಟ್ಟೆತುಂಬಾ ತಿಂದು ದಿನಗಟ್ಟಲೆ
ಆರಾಮವಾಗಿದೆ ಎಂದು ಅರಣ್ಯ ಸಿಬ್ಬಂದಿ ಮಾತನಾಡಿಕೊಳ್ಳುತ್ತಿದ್ದರು.