ಕೊಳ್ಳೇಗಾಲ-ಬೆಂಗಳೂರು ಹೆದ್ದಾರಿ ಮಾರ್ಗದ ಸತ್ತೇಗಾಲದಿಂದ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ತೆರಳುವ ಜಂಕ್ಷನ್ ಬಳಿ ಶನಿವಾರ ಕಾರಿನಲ್ಲಿ ರಕ್ತಚಂದನ ಮರಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳ ಜತೆ ಸಿಐಡಿ ಅರಣ್ಯ ಸಂಚಾರ ದಳ ಪೊಲೀಸರು ಇದ್ದರು. 
ಚಾಮರಾಜನಗರ

ರಕ್ತಚಂದನ ಸಾಗಣೆ ಮಾಡುತ್ತಿದ್ದ ಮೂವರ ಬಂಧನ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • 85 ಕೆಜಿ ಮರದ ತುಂಡುಗಳ ವಶ
ಕೊಳ್ಳೇಗಾಲ: ತಾಲೂಕಿನ ಬೆಂಗಳೂರು ಹೆದ್ದಾರಿ ಮಾರ್ಗದ ಸತ್ತೇಗಾಲದಿಂದ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ತೆರಳುವ ಜಂಕ್ಷನ್ ಬಳಿ ಶನಿವಾರ ಕಾರಿನಲ್ಲಿ ರಕ್ತಚಂದನ ಮರಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಐಡಿ ಅರಣ್ಯ ಸಂಚಾರ ದಳ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಿವಾಸಿಗಳಾದ ಜಯಚಂದ್ರ, ಸುಮಂತ್, ಕಾರು ಚಾಲಕ ಹರೀಶ್ ಬಂಧಿತರು. 85 ಕೆ.ಜಿ.ತೂಕದಷ್ಟು ರಕ್ತ ಚಂದನ ಮರಗಳನ್ನು ವಶಕ್ಕೆ ಪಡೆದಿದ್ದಾರೆ. ರಕ್ತಚಂದನ ಮರದ ತುಂಡುಗಳನ್ನು ಬೆಂಗಳೂರಿನಿಂದ ಕೇರಳಕ್ಕೆ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಸಂಚಾರ ದಳದ ಪಿಎಸ್‌ಐ ವಿಜಯರಾಜ್ ತಂಡ ತಾಲೂಕಿನ ಸತ್ತೇಗಾಲದಿಂದ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ತೆರಳುವ ಜಂಕ್ಷನ್ ಬಳಿ ಕಾರನ್ನು ತಡೆದು ಪರಿಶೀಲಿಸಿ, ರಕ್ತ ಚಂದನ ಮರಗಳನ್ನು ವಶಕ್ಕೆ ಪಡೆದರು. ಮೂವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.