ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಎಲ್‌ಎಸ್‌ಡಿ ಕನ್ನಡ ನಗೆ ನಾಟಕ ಪ್ರದರ್ಶನವನ್ನು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ಉದ್ಘಾಟಿಸಿದರು. ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಸುನೇತ್ರಾ ಪಂಡಿತ್, ಸ್ನೇಹಾ ಕಪ್ಪಣ್ಣ, ಡಾ.ಸುಷ್ಮಾ, ಅಬ್ದುಲ್ ಅಜೀಜ್ ದೀನಾ, ನಾಗಶಿಲ್ಪ, ನಂಜುಂಡಯ್ಯ, ಎಲ್.ಸುರೇಶ್ ಇತರರು ಇದ್ದರು. 
ಚಾಮರಾಜನಗರ

ಮನುಷ್ಯನಿಗೆ ವ್ಯಕ್ತಿತ್ವ ಬೆಳೆಸುವ ರಂಗಭೂಮಿ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು
  • ಎಲ್‌ಎಸ್‌ಡಿ ಕನ್ನಡ ನಗೆ ನಾಟಕ ಪ್ರದರ್ಶ
ಚಾಮರಾಜನಗರ: ರಂಗಭೂಮಿ ಮನುಷ್ಯನ ವ್ಯಕ್ತಿತ್ವವನ್ನು ಬೆಳೆಸುತ್ತದೆ. ನಾಟಕದಿಂದ ಸಮಾಜದ ಅಂಕುಡೊಂಕು ತಿದ್ದುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ರಂಗವಾಹಿನಿ ವತಿಯಿಂದ ಆಷಾಢ ರಂಗ ಸಂಭ್ರಮದ ಅಂಗವಾಗಿ ಎಲ್‌ಎಸ್‌ಡಿ ಕನ್ನಡ ನಗೆ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ನಾಟಕ ಕೂಡ ಮನರಂಜನೆ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಅಂಶಗಳನ್ನು ಒಳಗೊಂಡಿದೆ ಎಂದರು.
ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿ, ಜಿಲ್ಲೆಯು ಕಲಾವಿದರ ತವರೂರಾಗಿದ್ದು, ಜಿಲ್ಲೆಯಲ್ಲಿ ನಾಟಕಗಳು ನಶಿಸಿಹೋಗದಂತೆ ಯುವಪೀಳಿಗೆಯು ಶಾಲಾ-ಕಾಲೇಜುಗಳಲ್ಲಿ ನಾಟಕಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಮಾಜ ಸೇವಕ ಶ್ರೀನಿಧಿ ಕುದರ್ ಮಾತನಾಡಿ, ಜಿಲ್ಲೆಯಲ್ಲಿ ಜನಿಸಿದ ಡಾ.ರಾಜ್ ಕುಮಾರ್ ಅವರು ರಂಗಭೂಮಿ ಕಲೆಯಿಂದ ಕನ್ನಡ ಚಿತ್ರರಂಗದಲ್ಲಿ ಮೇರುನಟರಾಗಿ ಬೆಳೆದು ದೇಶದಲ್ಲಿ ಹೆಸರು ಮಾಡಿದರು. ಅಂತಹವರ ಹೆಸರಿನ ರಂಗಮಂದಿರಕ್ಕೆ ಹವಾನಿಯಂತ್ರಿಣ ಸೇರಿದಂತೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಎಲ್‌ಎಸ್‌ಡಿ ಕನ್ನಡ ನಗೆ ನಾಟಕ ಮನರಂಜನೆ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸಾರುತ್ತದೆ. ಇದು ಮೈಸೂರಿನಲ್ಲಿ ಪ್ರದರ್ಶನವಾಗಿತು. ಚಾಮರಾಜನಗರ ಜಿಲ್ಲೆಯ ಜನತೆ ನೋಡಬೇಕು ಎಂಬ ಆಶಯದಲ್ಲಿ ಇಂದು ನಾಟಕ ಪ್ರದರ್ಶನ ಮಾಡಲಾಯಿತು. ನಾಟಕಗಳನ್ನು ನೋಡುವ ಮೂಲಕ ಪ್ರತಿಯೊಬ್ಬರೂ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಕಲಾವಿದರಾದ ಸುನೇತ್ರಾ ಪಂಡಿತ್, ಸ್ನೇಹಾ ಕಪ್ಪಣ್ಣ, ಡಾ.ಸುಷ್ಮಾ ಅಭಿನಯದ ಎಲ್‌ಎಸ್‌ಡಿ ಕನ್ನಡ ನಗೆ ನಾಟಕ ಉತ್ತಮವಾಗಿ ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಯಿತು. ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ, ಬಿಎಸ್‌ಐ ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗಶಿಲ್ಪ, ಉಪನ್ಯಾಸಕ ನಂಜುಂಡಯ್ಯ, ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಲ್.ಸುರೇಶ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿದರು. ಆಹಾರ ನಿರೀಕ್ಷಕ ಪ್ರಸಾದ್, ಮಹೇಶ್ ಇತರರು ಹಾಜರಿದ್ದರು.