ಕೊಳ್ಳೇಗಾಲದ ಭವನ್ಸ್ ಗೀತಾ ವಿದ್ಯಾಲಯದಲ್ಲಿ ಭಾನುವಾರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮೈಸೂರಿನ ಬೆಳ್ಳೂರು ಕಮಲಮ್ಮ ಸುಬ್ಬಣ್ಣ ವಿದ್ಯಾಭವನ್ ನಿವೃತ್ತ ಪ್ರಾಂಶುಪಾಲೆ ವಿಜಯಾ ನರಸಿಂಹಮ್ ಚಾಲನೆ ನೀಡಿದರು. ಎನ್.ಗಿರಿರಾಜನ್, ಚೆನ್ನಮಾದೇಗೌಡ, ಎಂ.ಎಂ. ಮಹೇಶ್ವರಿ, ಎಸ್.ಲೋಕೇಶ್ ಇದ್ದರು.
ನಿವೃತ್ತ ಪ್ರಾಂಶುಪಾಲೆ ವಿಜಯಾ ನರಸಿಂಹನ್ ಅಭಿಮತ
ಕೊಳ್ಳೇಗಾಲ: ಮಕ್ಕಳ ಶೈಕ್ಷಣಿಕ ಮಟ್ಟದ ಪ್ರಗತಿಯಲ್ಲಿ ಶಿಕ್ಷಕರು ಮತ್ತು ಪಾಲಕರ ಪಾತ್ರ ಪ್ರಮುಖವಾದದ್ದು ಎಂದು ಮೈಸೂರಿನ ಬೆಳ್ಳೂರು ಕಮಲಮ್ಮ ಸುಬ್ಬಣ್ಣ ವಿದ್ಯಾಭವನ್ ನಿವೃತ್ತ ಪ್ರಾಂಶುಪಾಲೆ ವಿಜಯಾ ನರಸಿಂಹಮ್ ಹೇಳಿದರು.
ಪಟ್ಟಣದ ಶ್ರೀ ಭವನ್ಸ್ ಗೀತಾ ವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳು ಓದಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಭವನ್ಸ್ ವಿದ್ಯಾಲಯದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಾಲೆಗೆ ಬರುವ ಮಕ್ಕಳಿಗೆ ಶಿಕ್ಷಕರು ವಿದ್ಯೆಯ ಜತೆಗೆ ಸಂವಹನ ಕೌಶಲ ತಿಳಿಸಬೇಕೆಂದರು.
ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಭವನ್ಸ್ ಗೀತಾ ವಿದ್ಯಾಲಯದ ಅಧ್ಯಕ್ಷ ಜಿ.ಎನ್.ಗಿರಿರಾ ಜನ್, ಉಪಾಧ್ಯಕ್ಷ ಎ.ಡಿ.ಕುಮಾರ ಕೃಷ್ಣ, ಕಾರ್ಯದರ್ಶಿ ಚೆನ್ನಮಾದೇಗೌಡ, ಮುಖ್ಯಶಿಕ್ಷಕಿ ಎಂ.ಎಂ.ಮಹೇಶ್ವರಿ, ಖಜಾಂಚಿ ಎಸ್.ಲೋಕೇಶ್, ಭವನ್ಸ್ ಗೀತಾ ವಿದ್ಯಾಲಯ ಟ್ರಸ್ಟಿ ಸದಸ್ಯ ನರಸಿಂಹನ್, ಕೆ.ಸಿ.ರಾಮಯ್ಯ, ನಟರಾಜ್ ಗುಪ್ತ ಮತ್ತಿತರರಿದ್ದರು.