ಕಬ್ಬಹಳ್ಳಿ ಗ್ರಾಮದ ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಟಿ.ಎನ್.ರಾಮಕೃಷ್ಣ ಉದ್ಘಾಟಿಸಿದರು. ಜೆ. ಸುರೇಂದ್ರ, ಸಿ.ಕೆ.ಸುರೇಶ, ಡಾ.ಸಿ.ಸುರೇಶ್ ಅಂಬ್ಳೆ, ಆರ್.ಮಹದೇವಸ್ವಾಮಿ, ಡಾ. ತೇಜಸ್ವಿನಿ, ಸಿ.ಶ್ರೀನಿವಾಸ್ ಇದ್ದರು. 
ಚಾಮರಾಜನಗರ

ಸ್ವಾತಂತ್ರೃ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ಚಿಂತಕ ಟಿ.ಎನ್.ರಾಮಕೃಷ್ಣ
  • ಕಬ್ಬಹಳ್ಳಿ ಗ್ರಾಮದ ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ
ಗುಂಡ್ಲುಪೇಟೆ: ಭಾರತದ ಸ್ವಾತಂತ್ರೃ ಹೋರಾಟದಲ್ಲಿ ತೀವ್ರಗಾಮಿಗಳು ಹಾಗೂ ಕ್ರಾಂತಿಕಾರಿಗಳ ಪಾತ್ರವೂ ದೊಡ್ಡದು ಎಂದು ಚಿಂತಕ ಟಿ.ಎನ್.ರಾಮಕೃಷ್ಣ ತಿಳಿಸಿದರು.
ತಾಲೂಕಿನ ಕಬ್ಬಹಳ್ಳಿ ಗ್ರಾಮದ ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದಿಂದ ಆಯೋಜಿಸಿದ್ದ ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರ ಪ್ರದರ್ಶನ, ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರೃ ಹೋರಾಟಕ್ಕೆ ತೀವ್ರಗಾಮಿಗಳು ಹಾಗೂ ಕ್ರಾಂತಿಕಾರಿಗಳ ಕೊಡುಗೆ ಅಪಾರವಾಗಿದ್ದು, ದೇಶದ ಪುನರುತ್ಥಾನಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಇಂದಿನ ಜನಾಂಗ ಅಂತಹವರನ್ನು ಸ್ಮರಿಸಬೇಕಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಜೆ.ಸುರೇಂದ್ರ ಮಾತನಾಡಿ, ಇಂದಿನ ಯುವಜನತೆಯಲ್ಲಿ ರಾಷ್ಟ್ರಾಭಿಮಾನ ಮೂಡಬೇಕು. ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ದೇಶದ ಪ್ರಗತಿಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಲಿದೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಸಿ.ಕೆ.ಸುರೇಶ, ಪ್ರಾಧ್ಯಾಪಕ ಡಾ.ಸಿ.ಸುರೇಶ್ ಅಂಬ್ಳೆ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಆರ್.ಮಹದೇವಸ್ವಾಮಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ತೇಜಸ್ವಿನಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಿ.ಶ್ರೀನಿವಾಸ್ ಇತರರು ಇದ್ದರು.