ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಗಳಿಸಿರುವ ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಎಂ.ರಿಷಿತಗೆ ಪಾಲಕರಾದ ಮಹೇಶ್ ಮತ್ತು ರೂಪಾ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು. 
ಚಾಮರಾಜನಗರ

ಎಸ್ಸೆಸ್ಸೆಲ್ಸಿ ‘ಟಾಪರ್’ಗಳ ಯಶಸ್ಸಿನ ‘ಟಿಪ್ಪಣಿ’

ಪ್ರಮುಖ ಮುಖ್ಯಾಂಶಗಳು

  • ಅಂಕ ಗಳಿಕೆಯಲ್ಲಿ ಕೊಳ್ಳೇಗಾಲದ ಕುವರಿಯರ ಸಾಧನೆ
  • ರಿಷಿತ, ನಿಹಾರಿಕ, ಸಿಂಚನ, ದೀಪಿಕ ಮಾದರಿ ಅಭ್ಯಾಸ ಕ್ರಮ
ಚಾಮರಾಜನಗರ: ಅಕ್ಕನನ್ನು ಹಿಂದಿಕ್ಕಿದ ತಂಗಿ, ಶಿಕ್ಷಕರಾದ ತಂದೆ-ತಾಯಿಗೆ ಕೀರ್ತಿ ತಂದ ಕುವರಿ, ಸರ್ಕಾರದ ಅಂಕಿ-ಅಂಶದಲ್ಲಿ ಅಗ್ರಸ್ಥಾನ ಪಡೆದ ಖಾಸಗಿ ಕ್ಷೇತ್ರದ ಉದ್ಯೋಗಸ್ಥ ದಂಪತಿಯ ಪುತ್ರಿ, ಕೂಲಿ ಮಾಡುವ ತಾಯಿಗೆ ಲಿತಾಂಶದ ಉಡುಗೊರೆ ಕೊಟ್ಟ ಮಗಳು..!
ಇದು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಟಾಪರ್‌ಗಳಾಗಿ ಹೊರಹೊಮ್ಮಿರುವ ನಾಲ್ವರು ವಿದ್ಯಾರ್ಥಿನಿಯರ ಯಶಸ್ಸಿನ ಟಿಪ್ಪಣಿಯ ಮುನ್ನುಡಿ. ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ಎಂ.ರಿಷತ 625ಕ್ಕೆ 623 ಅಂಕ ಗಳಿಸಿ ಜಿಲ್ಲೆಗೆ ಅಗ್ರಸ್ಥಾನ ಪಡೆದಿರುವುದಲ್ಲದೇ ರಾಜ್ಯದ ಗಮನ ಸೆಳೆದಿದ್ದಾಳೆ. ಕೊಳ್ಳೇಗಾಲದ ದೇವಾಂಗ ಬೀದಿಯ ನಿವಾಸಿ ಪೊಲೀಸ್ ಮಹೇಶ್ ಮತ್ತು ರೂಪಾ ಪುತ್ರಿ ರಿಷಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಂಕ ಗಳಿಕೆಯಲ್ಲಿ ಅಕ್ಕನನ್ನೇ ಮೀರಿಸಿದ್ದಾಳೆ. ಈಕೆಯ ಸಹೋದರಿ ಮೇಘನಾ 2020ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 621 ಅಂಕ ಗಳಿಸಿದ್ದಳು. ಈಗ ತಂಗಿ ರಿಷಿತ ಅಕ್ಕನಿಗಿಂತ 2 ಅಂಕ ಹೆಚ್ಚು ಗಳಿಸಿ ಅಂದರೆ 623 ಅಂಕ ಗಳಿಸಿದ್ದಾಳೆ. ಅಕ್ಕನಂತೆ ಎಂಬಿಬಿಎಸ್ ಮಾಡುವ ಗುರಿಯನ್ನು ಹೊಂದಿದ್ದಾಳೆ.
ಇನ್ನು 625ಕ್ಕೆ 620 ಅಂಕ ಗಳಿಸಿರುವ ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ನಿಹಾರಿಕ ತಂದೆ ಮರಪ್ಪ ಮತ್ತು ತಾಯಿ ಜಯಶ್ರೀ ಇಬ್ಬರೂ ಸರ್ಕಾರಿ ಶಾಲೆ ಶಿಕ್ಷಕರು. ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಮರಪ್ಪ ಮತ್ತು ಜಯಶ್ರೀ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಇಬ್ಬರು ಶಿಕ್ಷಕರ ಮಗಳು ಶಿಕ್ಷಣದ ಮಹತ್ವ ಸಾರುವಂತೆ ಅಂಕ ಗಳಿಸಿ ತಂದೆ-ತಾಯಿಯ ಶಿಕ್ಷಣ ಸೇವೆಯ ಮೌಲ್ಯ ಹೆಚ್ಚಿಸಿದ್ದಾಳೆ.
ಖಾಸಗಿ ೈನಾನ್ಸ್‌ನಲ್ಲಿ ಕೆಲಸ ಮಾಡುವ ಸತೀಶ್ ಮತ್ತು ವಾಸವಿ ಶಾಲೆ ಶಿಕ್ಷಕಿ ಪ್ರತಿಭಾ ಪುತ್ರಿ, ವಾಸವಿ ಶಾಲೆಯ ವಿದ್ಯಾರ್ಥಿನಿ ಸಿಂಚನಾ ಸತೀಶ್ 620 ಅಂಕ ಗಳಿಸುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಲಿತಾಂಶದಲ್ಲಿ ಸರ್ಕಾರದ ಲೆಕ್ಕದಲ್ಲಿ ಟಾಪ್-2 ಸ್ಥಾನ ಪಡೆದುಕೊಂಡಿದ್ದಾಳೆ. ತಂದೆ ಇಲ್ಲದೆ ತಾಯಿ ಜ್ಯೋತಿ ಕೃಷಿ ಕೂಲಿ ಕೆಲಸ ಮಾಡಿಕೊಂಡು ಓದಿಸುತ್ತಿರುವ ಮಗಳು ಎನ್.ದೀಪಿಕ. ಈಕೆ ಕೊಳ್ಳೇಗಾಲದ ತಿಮ್ಮರಾಜೀಪುರ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ಓದುತ್ತಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 619 ಅಂಕ ಗಳಿಸಿ ತಾಯಿಯ ಶ್ರಮಕ್ಕೆ ಪ್ರತಿಲ ಕೊಟ್ಟಿದ್ದಾಳೆ.
ಶ್ರಮದ ಹಿಂದಿರುವ ಲಿತಾಂಶ:
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳ ಲಿತಾಂಶದ ಹಿಂದೆ ಪರಿಶ್ರಮ ಅಗಾಧವಾಗಿ ಅಡಗಿದೆ. ರಿಷಿತ ತಾನು ಹಾರ್ಡ್‌ವರ್ಕ್ ಮತ್ತು ಸ್ಮಾರ್ಟ್‌ವರ್ಕ್ ಎರಡನ್ನೂ ಮಾಡುತ್ತಿದೆ. ಅಂದಿನ ಪಾಠಗಳನ್ನು ಅಂದೇ ಅಭ್ಯಾಸ ಮಾಡುತ್ತಿದೆ. ಶಾಲೆ ಮತ್ತು ಪಾಠಶಾಲೆಯಲ್ಲಿ ಶಿಕ್ಷಕರು ಚೆನ್ನಾಗಿ ಮಾರ್ಗದರ್ಶನ ನೀಡಿದರು ಎಂದು ಹೇಳುತ್ತಾಳೆ.
ವಿದ್ಯಾರ್ಥಿನಿ ನಿಹಾರಿಕ ತನ್ನ ಓದಿನ ಅಭ್ಯಾಸ ಸಹಜವಾಗಿಯೇ ಇತ್ತು. ರಜೆ ಸಂದರ್ಭದಲ್ಲಿ ಹೆಚ್ಚಿನ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಸಹಾಯವಾಯಿತು. ಪುನರಾವರ್ತನೆಗಳನ್ನು ಹೆಚ್ಚಾಗಿ ಮಾಡುತ್ತಿದೆ ಎಂದು ತಿಳಿಸಿದ್ದಾಳೆ. ವಿದ್ಯಾರ್ಥಿನಿ ಸಿಂಚನಾ ನಾನು ಪ್ರತಿ ದಿನ ಓದುವ ಅಭ್ಯಾಸವನ್ನು ಮಾಡುತ್ತಿದ್ದೆ. ಪಠ್ಯಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದೆ. ಇದನ್ನು ಕಂಠಪಾಠ ಮಾಡುವ ಬದಲು ಓದಿ ಅರ್ಥ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾಳೆ. ವಿದ್ಯಾರ್ಥಿನಿ ದೀಪಿಕಾ ಅಂದಿನ ಪಾಠ ಅಂದೇ ಓದುತ್ತಿದ್ದೆ. ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುತ್ತಿದ್ದೆ ಎಂದು ಹೇಳಿದ್ದಾಳೆ. ಇವರ ಅಭ್ಯಾಸದ ಕ್ರಮ ಇವರನ್ನು ಜಿಲ್ಲೆಯ ಟಾಪರ್‌ಗಳನ್ನಾಗಿ ಹೊರಹೊಮ್ಮಿಸಿದೆ.