ಚಾಮರಾಜನಗರ ತಾಲೂಕಿನ ಅಮ್ಮನಪುರ ಗ್ರಾಮದಲ್ಲಿ ಪ್ರೇಮಮ್ಮ ಅವರ ಜಮೀನಿನಲ್ಲಿ ಮಳೆಯ ಹೊಡೆತಕ್ಕೆ ನೆಲಕಚ್ಚಿರುವ ಬಾಳೆ
- ತೋಟಗಾರಿಕೆ ಬೆಳೆಗಳಿಗೆ ಹಾನಿ
- ಹಲವೆಡೆ ನೆಲಕಚ್ಚಿದ ಬಾಳೆ, ಅಧಿಕ ನಷ್ಟ
ಚಾಮರಾಜನಗರ ಜಿಲ್ಲೆಯಲ್ಲಿ ಹವಾಮಾನ ವೈಪರಿತ್ಯ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲೇ ಇದೆ. ಅಕಾಲಿಕ ಮಳೆಯ ಹೊಡೆತದ ನಡುವೆ ರೈತರು ಸಿಲುಕಿ ನಲುಗುತ್ತಿದ್ದಾರೆ.
ಈ ಸಲ ಬೇಸಿಗೆ ಕಾಲದ ತಾಪಮಾನ ಅಧಿಕವಾಗಿದೆ. ಜಲಮೂಲಗಳು ಕ್ಷೀಣಿಸಿ ಅಂತರ್ಜಲ ಮಟ್ಟಕ್ಕೂ ಬಿಸಿ ತಟ್ಟಿದೆ. ಜನ-ಜಾನುವಾರುಗಳಿಗೆ ಕುಡಿಯುವುದಕ್ಕೂ ನೀರಿಲ್ಲ. ಇನ್ನು ಕೃಷಿಗೆಲ್ಲಿಂದ ನೀರು ಒದಗಿಸಲು ಸಾಧ್ಯ. ಹಾಗಾಗಿ ಬೆಳೆಗಳು ಒಣಗಿ ಮಣ್ಣುಪಾಲಾದವು. ಇದರ ನಡುವೆ ಸುರಿದ ಅಕಾಲಿಕ ಮಳೆಯ ಹೊಡೆತ ಕೆಲವೆಡೆ ಕೃಷಿಗೆ ಖುಷಿ ತರದೆ ಬೆಳೆಗಳು ನೆಲಕಚ್ಚಿದವು. ಬರ ಮತ್ತು ಅಕಾಲಿಕ ಮಳೆಯ ನಡುವೆ ಸಿಲುಕಿರುವ ರೈತರು ಈಗ ಬೆಳೆ ನಷ್ಟದ ಲೆಕ್ಕಾಚಾರ ಹಾಕುತ್ತಾ ಚಿಂತೆಗೀಡಾಗುತ್ತಿದ್ದಾರೆ.
ಗಾಳಿ, ಮಳೆಯ ಆರ್ಭಟ: ಚಾಮರಾಜನಗರ ತೋಟಗಾರಿಕೆ ಬೆಳೆಗಳನ್ನು ಪ್ರಮುಖವಾಗಿ ಬೆಳೆಯುವ ಜಿಲ್ಲೆ. ಸಮೀಪದಲ್ಲೇ ತಮಿಳುನಾಡು, ಕೇರಳ ರಾಜ್ಯಗಳಿರುವುದರಿಂದ ಅಲ್ಲಿನ ಮಾರುಕಟ್ಟೆಯಲ್ಲಿ ಇಲ್ಲಿ ತರಕಾರಿ, ಹಣ್ಣುಗಳಿಗೆ ಬೆಲೆ ಉತ್ತಮ ಬೆಲೆ ಸಿಗುತ್ತದೆ. ಮಧ್ಯವರ್ತಿಗಳಿಲ್ಲದೆ ರೈತನೇ ನೇರ ಮಾರಾಟಗಾರನಾದರೆ ಲಾಭಕ್ಕೇನು ಕೊರತೆ ಇಲ್ಲ. ಆದರೆ ಕೃಷಿಗೆ ಪೂರಕವಾಗಿ ಹವಾಮಾನವಿದ್ದರಷ್ಟೇ ಉತ್ಪಾದನೆ ಚೆನ್ನಾಗಿ ಆಗುತ್ತದೆ. ಇಲ್ಲದಿದ್ದರೆ ಬೆಳೆ ಹಾನಿ ಸಂಭವಿಸುತ್ತದೆ. ಗಾಳಿ ಮಳೆಯ ಹೊಡೆತಕ್ಕೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ತುಂಬಾ ಹಾನಿಗೊಳಗಾಗಿವೆ.
ಜಿಲ್ಲಾ ತೋಟಗಾರಿಕೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 613 ರೈತರು ಬೆಳೆ ನಷ್ಟಕ್ಕೆ ಸಿಲುಕಿದ್ದಾರೆ. ಬಾಳೆೆ-261.65 ಹೆಕ್ಟೇರ್, ಟಮೊಟೊ-8.20 ಹೆಕ್ಟೇರ್, ಈರುಳ್ಳಿ-0.36 ಹೆಕ್ಟೇರ್, ಮೆಣಸಿ-4.94 ಹೆಕ್ಟೇರ್, ಸೌತೆಕಾಯಿ-4.33 ಹೆಕ್ಟೇರ್, ಪಪ್ಪಾಯ-1.20 ಹೆಕ್ಟೇರ್, ಕಲ್ಲಂಗಡಿ-6.30 ಹೆಕ್ಟೇರ್, ತೆಂಗು-1 ಹೆಕ್ಟೇರ್, ಬೀನ್ಸ್-0.21 ಹೆಕ್ಟೇರ್, ಪಡವಲಕಾಯಿ-0.50 ಹೆಕ್ಟೇರ್, ಬೀಟ್‌ರೋಟ್-0.60 ಹೆಕ್ಟೇರ್, ಎಲೆಕೋಸು-1.12 ಹೆಕ್ಟೇರ್, ಅಡಿಕೆ-0.70 ಹೆಕ್ಟೇರ್, ಅಡಿಕೆ-0.70 ಹೆಕ್ಟೇರ್, ಮಾವು-1.80 ಹೆಕ್ಟೇರ್ ಸೇರಿ ಒಟ್ಟು 292.91 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಾನಿಯಾಗಿದೆ.
21 ದಿನಗಳಲ್ಲಿ ಸಂಭವಿಸಿದ ನಷ್ಟವೆಷ್ಟು?: ಅಕಾಲಿಕ ಮಳೆಯಿಂದಾಗಿ ಕಳೆದ 21 ದಿನಗಳಲ್ಲಿ ಎನ್‌ಡಿಆರ್‌ಎಪ್ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಬಹುದಾದ ಅಂದಾಜು ಮೊತ್ತ 10,95,380 ರೂ.ಗಳಷ್ಟು ನಷ್ಟ ಸಂಭವಿಸಿದೆ. ಮೇ 5ರಿಂದ 25ರವರೆಗೆ ಜಿಲ್ಲಾ ತೋಟಗಾರಿಕಾ ಇಲಾಖೆ ಸಂಗ್ರಹಿಸಿರುವ ಬೆಳೆ ನಷ್ಟದ ವಿವರವನ್ನು ಗಮನಿಸುವುದಾದರೆ, 133 ರೈತರು 60.60 ಹೆಕ್ಟೇರ್‌ಗಳಲ್ಲಿ ಬೆಳೆದಿದ್ದ ಬಾಳೆಗೆ ಹಾನಿಯಾಗಿ 10.30,200 ರೂ ಅಂದಾಜು ನಷ್ಟ ಸಂಭವಿಸಿದೆ. ಇಬ್ಬರು ರೈತರು 0.40 ಹೆಕ್ಟೇರ್‌ನಲ್ಲಿ ಬೆಳೆದಿದ್ದ ತೆಂಗು ಹಾನಿಯಾಗಿ 9 ಸಾವಿರ ರೂ., ಒಬ್ಬ ರೈತ 0.20 ಹೆಕ್ಟೇರ್‌ನಲ್ಲಿ ಹಾಕಿದ್ದ ಅಡಿಕೆಗೆ ಹಾನಿಯಾಗಿ 4500 ರೂ., ಒಬ್ಬ ರೈತನ 0.20 ಹೆಕ್ಟೇರ್‌ನಲ್ಲಿದ್ದ ಈರುಳ್ಳಿಗೆ ಹಾನಿಯಾಗಿ 3,400 ರೂ., ಇಬ್ಬರು ರೈತರು 1 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಟೊಮೊಟೊ ಹಾನಿಯಾಗಿ 17 ಸಾವಿರ ರೂ., ಮೂವರು ರೈತರು 1.64 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳ್ಳುಳ್ಳಿ ಹಾನಿಯಾಗಿ 27,880 ರೂ., ಒಬ್ಬ ರೈತ 0.20 ಹೆಕ್ಟೇರ್‌ನಲ್ಲಿ ಹಾಕಿದ್ದ ಕರಬೂಜಗೆ ಮಳೆಯಿಂದ ಹಾನಿಯಾಗಿ 3,400 ರೂ. ನಷ್ಟ ಉಂಟಾಗಿದೆ ಎಂದು ಎನ್‌ಡಿಆರ್‌ಎ್ ಮಾರ್ಗಸೂಚಿ ಪ್ರಕಾರ ಅಂದಾಜಿಸಲಾಗಿದೆ.
ಮಳೆ ಮತ್ತು ಗಾಳಿಯಿಂದ ಹಾನಿಯಾಗಿರುವ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ನೀಡಲು ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಜಂಟಿಯಾಗಿ ಸರ್ವೆ ಮಾಡುತ್ತಿದೆ. ಈಗಾಗಲೇ ಸರ್ವೆ ಮಾಡಿರುವ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅವರು ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ರೈತರಿಗೆ ಪರಿಹಾರ ವಿತರಣೆಯಾಗುವುದಷ್ಟೇ ಬಾಕಿ ಇದೆ. ಮುಂದುವರೆದು ಬೀಳುತ್ತಿರುವ ಮಳೆಯಿಂದ ಆಗುತ್ತಿರುವ ಹಾನಿಯನ್ನೂ ದಾಖಲಿಸಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 22,500 ರೂ., ಏಕ ವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 17 ಸಾವಿರ ರೂ.ಗಳಂತೆ ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಬೆಳೆ ಹಾನಿಗೆ ಪರಿಹಾರ ಪಡೆಯಬೇಕಾದರೆ ಎ್ಐಡಿ(ಾರ್ಮರ್ ಐಡಿ) ಇರಲೇಬೇಕು. ಆದರೆ
ರಸಗೊಬ್ಬರ ಖರೀದಿಗೆ ಎ್ಐಡಿ(ಾರ್ಮರ್ ಐಡಿ) ಕಡ್ಡಾಯಗೊಳಿಸಿರುವುದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಸೋಮವಾರ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ಮಾಡಿದ್ದರು. ಎ್ಐಡಿ ಇರಬೇಕಾದರೆ ಜಮೀನಿನ ಸೂಕ್ತ ದಾಖಲೆಗಳಿರಬೇಕು. ೌತಿ ಖಾತೆಯ ಜಮೀನುಗಳು, ಸಣ್ಣ ಭೂ ಹಿಡುವಳಿದಾರರು ಎ್ಐಡಿ ಮಾಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎ್ಐಡಿ ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಿದ್ದರು.
ಅಕಾಲಿಕ ಮಳೆಯ ಆರ್ಭಟಕ್ಕೆ ಹಾನಿಯಾಗಿರುವ ಎಲ್ಲ ಬೆಳೆಗಳಲ್ಲಿ ಬಾಳೆಯೇ ಅಧಿಕವಾಗಿದೆ. ಮೇ 5ರಿಂದ ಮೇ 25ವರೆಗೆ ಚಾಮರಾಜನಗರ ತಾಲೂಕಿನಲ್ಲಿ 22.36 ಹೆಕ್ಟೇರ್, ಗುಂಡ್ಲುಪೇಟೆ ತಾಲೂಕಿನಲ್ಲಿ 20.48 ಹೆಕ್ಟೇರ್, ಕೊಳ್ಳೇಗಾಲ ತಾಲೂಕಿನಲ್ಲಿ 1.97 ಹೆಕ್ಟೇರ್, ಹನೂರು ತಾಲೂಕಿನಲ್ಲಿ 13.24 ಹೆಕ್ಟೇರ್, ಯಳಂದೂರು ತಾಲೂಕಿನಲ್ಲಿ 2.55 ಹೆಕ್ಟೇರ್ ಸೇರಿ ಒಟ್ಟು 60.60 ಹೆಕ್ಟೇರ್ ಬಾಳೆ ನಷ್ಟವಾಗಿದೆ.
ಮಳೆಯಿಂದ ಬೆಳೆ ಹಾನಿಯಾದ ಪ್ರದೇಶಕ್ಕೆ ಹೋಬಳಿ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷಿ ಮತ್ತು ತೋಟಗಾರಿಕೆ, ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಬೆಳೆ ಹಾನಿಯನ್ನು ವರದಿ ಮಾಡಲಾಗುತ್ತಿದೆ. ಪರಿಹಾರ ನೀಡುವುದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆ ಮಾಡಲಾಗುತ್ತಿದೆ.
ಬಿ.ಆರ್.ಗಿರೀಶ್, ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ, ಚಾಮರಾಜನಗರ
ಮಳೆಯಿಂದ ನಮ್ಮ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣ ಹಾನಿಯಾಗಿದೆ. ಸಾವಿರಕ್ಕೂ ಹೆಚ್ಚು ಬಾಳೆ ಕಟ್ಟೆಗಳು ನೆಲ ಕಚ್ಚಿವೆ. ಇನ್ನೆರಡು ತಿಂಗಳು ಬಾಳೆ ಇದ್ದಿದ್ದರೆ ಮಾರುಕಟ್ಟೆ ದರದ ಆಧಾರದ ಮೇಲೆ ಲಾಭ, ನಷ್ಟವನ್ನು ಕಾಣಬಹುದಾಗಿತ್ತು. ಈಗ ಬಾಳೆ ಹಾನಿಯಾಗಿರುವುದು ನಷ್ಟದ ಭಾರವನ್ನು ಹೆಚ್ಚು ಮಾಡಿದೆ. ಬಾಳೆ ಕೃಷಿಗೆ ಪ್ರಸ್ತುತ ದಿನಗಳಲ್ಲಿ ತಗುಲುತ್ತಿರುವ ವೆಚ್ಚವನ್ನು ಆಧರಿಸಿ ಸರ್ಕಾರದಿಂದ ನಷ್ಟ ಪರಿಹಾರವನ್ನು ನೀಡಬೇಕು.
ಸುರೇಶ್, ಅಮ್ಮನಪುರ ರೈತ, ಚಾಮರಾಜನಗರ
ಬೆಳೆ ನಷ್ಟ ಪರಿಹಾರ ನೀಡಲು ಎ್ಐಡಿ ಕೇಳುವುದನ್ನು ತಂತ್ರಾಂಶದ ಪ್ರಕಾರವೇ ಮಾಡಲಿ. ಆದರೆ
ರಸಗೊಬ್ಬರಕ್ಕೆ ಮಾತ್ರ ಎ್ಐಡಿ ಕೊಡಿ ಎಂದು ಕೇಳುವುದು ಸರಿಯಲ್ಲ. ಎಲ್ಲ ರೈತರೂ ಎ್ಐಡಿ ಮಾಡಿಸಿಲ್ಲ. ಎ್ಐಡಿ ಕಡ್ಡಾಯಗೊಳಿಸಿದರೆ ಕೃಷಿ ಉತ್ಪಾದನೆ ಕುಂಠಿತವಾಗುತ್ತದೆ.
ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯಾಧ್ಯಕ್ಷ,
ರಾಜ್ಯ ಕಬ್ಬು ಬೆಳೆಗಾರರ ಸಂಘ, ಚಾಮರಾಜನಗರ