ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ೆನ್ ಇನ್ ಕಾರ್ಯಕ್ರಮದಲ್ಲಿ ಡಿಸಿ ಶ್ರೀರೂಪಾ ಮಾತನಾಡಿದರು. ಜಿಪಂ ಸಿಇಒ ಮೋನಾರೋತ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
- ಡಿಸಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ೆನ್ ಇನ್ ಕಾರ್ಯಕ್ರಮ
- ಅನಿಷ್ಟ ಪಿಡುಗಿನಿಂದ ನೋವಾಗುತ್ತಿರುವುದನ್ನು ಹೇಳಿಕೊಂಡ ಇಬ್ಬರು
ಚಾಮರಾಜನಗರ: ಸಮಾಜದ ಅನಿಷ್ಟ ಪದ್ಧತಿಗಳಲ್ಲಿ ಒಂದಾಗಿರುವ ಸಾಮಾಜಿಕ ಬಹಿಷ್ಕಾರದಿಂದ ನೊಂದು ಬೇಯುತ್ತಿರುವುದಾಗಿ ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಅಳಲಿನ ಕರೆ ಬಂತು..!
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದು-ಕೊರತೆ ಆಲಿಸುವ ನೇರ ೆನ್ ಇನ್ ಕಾರ್ಯಕ್ರಮದಲ್ಲಿ ಡಿಸಿ ಶ್ರೀರೂಪಾ ಸ್ವೀಕಾರ ಮಾಡಿ ಮಾತನಾಡಿದ ಕರೆಗಳಲ್ಲಿ ತಾಲೂಕಿನ ಹೆಬ್ಬಸೂರಿನ ಶಿವಕುಮಾರ್ ಗ್ರಾಮದಲ್ಲಿ ತನ್ನ ಕುಟುಂಬ ಸಾಮಾಜಿಕ ಬಹಿಷ್ಕಾರದ ಅಪಮಾನ ಅನುಭವಿಸುತ್ತಿರುವುದಾಗಿ ನೋವು ತೋಡಿಕೊಂಡರು. ಸರದಿಯಲ್ಲಿ ನಮ್ಮನ್ನು ಕೇಳುತ್ತಿಲ್ಲ. ಹಬ್ಬಕ್ಕೆ ಕರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೋಳಿಪಾಳ್ಯದ ಶಾಂತಿಬಾಯಿ ೆನ್ ಮಾಡಿ, ಜಮೀನಿನ ವಿಚಾರದಲ್ಲಿ ಗ್ರಾಮಸ್ಥರಿಗೂ ನಮಗೂ ಜಗಳವಾಗಿದೆ. ಈ ದ್ವೇಷದಿಂದ ನಮ್ಮ ಕುಟುಂಬದ ಬಳಿ ಜಾತ್ರೆ, ಹಬ್ಬಗಳಿಗೆ ಹಣ ಪಡೆದುಕೊಳ್ಳುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಇವರಿಬ್ಬರ ಅಳಲು ಆಲಿಸಿದ ಡಿಸಿ ಶ್ರೀರೂಪಾ ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ಅವರ ಗಮನಕ್ಕೆ ತಂದು ಕ್ರಮವಹಿಸುವುದು. ಕೋಳಿಪಾಳ್ಯ ಗ್ರಾಮಕ್ಕೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಕಳುಹಿಸುವುದಾಗಿ ತಿಳಿಸಿದರು.
ಗುಂಡ್ಲುಪೇಟೆಯ ಗಿರೀಶ್‌ಕುಮಾರ್ ಕರೆ ಮಾಡಿ ತನ್ನ ರೆಸಾರ್ಟ್ ನಡೆಸಲು ತೊಂದರೆಯಾಗುತ್ತಿರುವ ಬಗ್ಗೆ ಹೇಳಿಕೊಂಡರು. ನ್ಯಾಯಾಲಯದಲ್ಲಿ ನನ್ನ ಪರವಾಗಿದ್ದರೂ ರೆಸಾರ್ಟ್ ನಡೆಸಲು ಆಗುತ್ತಿಲ್ಲ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರೆ ಸ್ಪಂದಿಸುತ್ತಿಲ್ಲ. ನನ್ನ ವಿರುದ್ಧವೇ ದೂರು ದಾಖಲು ಮಾಡುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ವಿಷಯವನ್ನೂ ಸಹ ಎಸ್ಪಿ ಎಂ.ಮುತ್ತುರಾಜು ಅವರ ಗಮನಕ್ಕೆ ತಂದು ಕ್ರಮವಹಿಸುವುದಾಗಿ ಡಿಸಿ ಶ್ರೀರೂಪಾ ಭರವಸೆ ನೀಡಿದರು.
ದೂರಿನ ಕರೆಗಳ ಮೂಲ ನಗರಸಭೆ: ೆನ್ ಇನ್ ಕಾರ್ಯಕ್ರಮಕ್ಕೆ ಬಂದ ದೂರಿನ ಕರೆಗಳಲ್ಲಿ ಬಹುಪಾಲು ಸಮಸ್ಯೆಗಳು ಚಾಮರಾಜನಗರ ನಗರಸಭೆ ವ್ಯಾಪ್ತಿಗೆ ಸೇರಿದ್ದವು. ಈ ವಿಷಯವನ್ನು ಗುರುತಿಸಿದ ಡಿಸಿ ಶ್ರೀರೂಪಾ ಪೌರಾಯುಕ್ತ ಪರಶುರಾಮ್ ಛಲವಾದಿಗೆ ನಗರಸಭೆಯ ದೂರುಗಳೇ ಹೆಚ್ಚಾಗಿವೆ ಎಂದು ಹೇಳಿದರು. ನಗರದ ವಿನಾಯಕ ಬಡಾವಣೆಯ ನಿವಾಸಿ ಬಿಬಿ ಸುಮಯಾ ಕರೆ ಮಾಡಿ, ವಾರ್ಡ್‌ನಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿರುವ ಬೀದಿಯಲ್ಲಿ ಮಕ್ಕಳಿಗೆ ರೋಗ ರುಜಿಗಳು ಬರುತ್ತಿವೆ ಎಂದು ತಿಳಿಸಿದರು. ಡಿಸಿ ಶ್ರೀರೂಪಾ ಪ್ರತಿಕ್ರಿಯಿಸಿ, ೆನ್ ಇನ್ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಪೌರಾಯುಕ್ತ ಪರಶುರಾಮ್ ಛಲವಾದಿ ಅವರನ್ನು ಸ್ಥಳಕ್ಕೆ ಭೇಟಿ ನೀಡಲು ತಿಳಿಸಲಾಗುವುದು ಎಂದರು.
ನಗರಸಭೆಗೆ ಸಂಬಂಧಿಸಿದಂತೆ 26ನೇ ವಾರ್ಡ್‌ನಲ್ಲಿ ಜಲ್ಲಿ ಹಾಕಿ ಡಾಂಬರೀಕರಣ ಮಾಡಿಲ್ಲವೆಂದು ಮತ್ತು ಹೌಸಿಂಗ್ ಬೋರ್ಡ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನ ಸ್ವಚ್ಛತೆ ಇಲ್ಲವೆಂದು ದೂರಿನ ಕರೆಗಳು ಬಂದವು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಮೋನಾರೋತ್, ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರ್‌ಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.
‘ಭೂಮಿ ತೂಕ’ದಷ್ಟೇ ಸಮಸ್ಯೆಗಳೂ ಅಧಿಕ:
ಡಿಸಿ ಶ್ರೀರೂಪಾ ಅಧ್ಯಕ್ಷತೆ ಮೊದಲ ೆನ್ ಇನ್ ಕಾರ್ಯಕ್ರಮದಲ್ಲೂ ಕಂದಾಯ ವ್ಯಾಜ್ಯಗಳ ದೂರುಗಳೇ ಹೆಚ್ಚಾಗಿ ಕೇಳಿಬಂದಿದ್ದವು. ಎರಡನೇ ೆನ್ ಇನ್ ಕಾರ್ಯಕ್ರಮದಲ್ಲೂ ಭೂಮಿ ತೂಕದಷ್ಟೇ ಸಮಸ್ಯೆಗಳೂ ಅಧಿಕವಾಗಿ ಕೇಳಿಬಂದವು. ಯಣಗುಂಬದಲ್ಲಿ ಸಾಗುವಳಿ ಚೀಟಿ ಇದ್ದರೂ ಖಾತೆಯಾಗುತ್ತಿಲ್ಲ, ಹನೂರಿನ ರಾಘವೇಂದ್ರ ಕರೆ ಮಾಡಿ, ಸಾಗುವಳಿ ಚೀಟಿ ಕಳೆದು ಹೋಗಿದೆ. ಹುಲ್ಲೇಪುರದ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಕೊಟ್ಟರೂ ಪ್ರಯೋಜವಾಗಿಲ್ಲ. ಹರದನಹಳ್ಳಿ ಸ್ಟೇಟ್ ಾರೆಸ್ಟ್‌ನಲ್ಲಿ ಜಮೀನಿನ ರಸ್ತೆಗಾಗಿ ಅರ್ಜಿ ಹಾಕಿದ್ದರೂ ಸ್ಪಂದಿಸುತ್ತಿಲ್ಲವೆಂಬ ದೂರುಗಳು ಕೇಳಿಬಂದವು. ಸ್ವಾತಂತ್ರ್ಯ ಹೋರಾಟಗಾರ ದಿವಂಗತ ರಂಗಸ್ವಾಮಿ ನಾಯಕ ಅವರ ಜಮೀನಿ ದುರಸ್ತಿ ಮಾಡಿಕೊಡಲು ಮಗ ಕೇಳಿಕೊಂಡರು. ಹೆಗ್ಗೋಠಾರದ ಶಾಂತಪ್ಪ ಕರೆ ಮಾಡಿ, ರಾಜ್ಯ ಸರ್ಕಾರ ನಮ್ಮ ಹೊಲ-ನಮ್ಮ ಜಮೀನು ಕಾರ್ಯಕ್ರಮ ಮಾಡಿದೆ. ಆದರೆ ನಮ್ಮೂರಿನಲ್ಲಿ ಸರ್ಕಾರಿ ಓಣಿಯನ್ನು ತೆರವು ಮಾಡಿಲ್ಲ. ಜಾಗ ಒತ್ತುವರಿಯಾಗಿರುವುದರಿಂದ ಜಮೀನಿಗೆ ಹೋಗಲು ದಾರಿ ಇಲ್ಲವೆಂದರು. ಸಮಸ್ಯೆಗೆ ಪರಿಹಾರ ದೊರಕಿಸುವುದಾಗಿ ಡಿಸಿ ಶ್ರೀರೂಪಾ ತಿಳಿಸುತ್ತಿದ್ದಂತೆಯೇ, ಡಿಸಿ ಕಚೇರಿ ಸಭಾಂಗಣದ ಹೊರಗೆ ನಿಂತು ಕರೆ ಮಾಡಿದ್ದ ಶಾಂತಪ್ಪ ತಾನು ಒಳಗೆ ಬಂದು ವಿವರಿಸಲಾ ಎಂದು ಕೇಳಿಕೊಂಡರು. ಡಿಸಿ ಶ್ರೀರೂಪಾ ಬೇಡ. ಈಗ ೆನ್ ಇನ್ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಶಾಂತಪ್ಪ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ೆನ್ ಇನ್ ಕಾರ್ಯಕ್ರಮಕ್ಕೆ ಸಭಾಂಗಣದ ಹೊರಗೆ ನಿಂತು ಕರೆ ಮಾಡಿದ್ದ ಪ್ರಸಂಗ ಅಧಿಕಾರಿಗಳನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು.
ಮುಂದುವರೆದ ಕೆಎಸ್‌ಆರ್‌ಟಿಸಿ ಗೋಳು:
ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ನಿಲ್ದಾಣಗಳೇ ಇಲ್ಲ. ಸಮರ್ಪಕವಾಗಿ ಬಸ್ ಸೌಲಭ್ಯ ದೊರೆಯದೆ ಇರುವ ಸಮಸ್ಯೆ ೆನ್ ಇನ್ ಕಾರ್ಯಕ್ರಮದಲ್ಲೂ ಪ್ರತಿಧ್ವನಿಸಿತು. ಬಿಳಿಗಿರಿರಂಗನಬೆಟ್ಟದ ದೊರೆಸ್ವಾಮಿ ಮಾಡಿ, ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಆಸನಗಳ ವ್ಯವಸ್ಥೆಯೇ ಇಲ್ಲ. ಖಾಸಗಿ ಬಸ್‌ಗಳ ಬಳಿ ಸುಂಕ ವಸೂಲಿ ಮಾಡಲಾಗುತ್ತದೆ. ಸೌಲಭ್ಯವನ್ನೂ ಮಾತ್ರ ನೀಡಿಲ್ಲವೆಂದರು. ತಾಲೂಕಿನ ಉಡಿಗಾಲ ಗ್ರಾಮದ ಸುನೀಲ್ ೆನ್ ಮಾಡಿ, ನಮ್ಮೂರಿನಲ್ಲಿ ಬಸ್ ನಿಲ್ದಾಣವಿಲ್ಲ. ಬಸ್‌ಗಾಗಿ ಕಾಯುವ ಪ್ರಯಾಣಿಕರು ರಸ್ತೆ ಬದಿಯಲ್ಲಿ ನಿಲ್ಲುತ್ತಿದ್ದಾರೆ ಎಂದು ಹೇಳಿದರು. ರಾಮಸಮುದ್ರದ ನಾಗೇಶ್ ನಾಯಕ ಕರೆ ಮಾಡಿ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ(ಸಿಮ್ಸ್) ರಾತ್ರಿ 8 ಗಂಟೆಯ ಬಳಿಕ ಬಸ್‌ಗಳಿಲ್ಲ. ಬರುವ ಬಸ್‌ಗಳು ತಕ್ಷಣ ಹೊರಟುಹೋಗುತ್ತಿವೆ. ಬಿ.ರಾಚಯ್ಯ ಜೋಡಿ ರಸ್ತೆಗೆ ನಗರ ಸಾರಿಗೆ ಬಸ್ ನಿಯೋಜಿಸಿ ಎಂದು ಮನವಿ ಮಾಡಿದರು. ಎಲ್ಲರ ಸಮಸ್ಯೆ ಆಲಿಸಿದ ಡಿಸಿ ಶ್ರೀರೂಪಾ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಅವರಿಗೆ ಕ್ರಮವಹಿಸಲು ತಿಳಿಸಿದರು.
ಯಳಂದೂರಿನ ಯರಿಯೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ಸ್, ಡಿವೈಡರ್, ನಾಮಲಕ ಅಳವಡಿಸಲು ಶ್ರೀನಿವಾಸ್ ಕೇಳಿಕೊಂಡರು. ಇಲ್ಲದಿದ್ದರೆ ಗುತ್ತಿಗೆದಾರರ ಮೇಲೆ ಎ್ಐಆರ್ ದಾಖಲಿಸಿ ಎಂದು ಒತ್ತಾಯಿಸಿದರು. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾವೇರಿ ನೀರಿನ ಪೈಪ್‌ಲೈನ್ ಹೊಡೆದು ಹೋಗಿ ನೀರು ಪೋಲಾಗುತ್ತಿದೆ ಎಂದು ಅಕ್ಬರ್ ತಿಳಿಸಿದರು. ಚಿಕ್ಕಂಗಡಿ ಬೀದಿಯ ಅರ್ಜುನ್ ಕರೆ ಮಾಡಿ, ನಗರದ ಹಳೆಯ ಜಿಲ್ಲಾಸ್ಪತ್ರೆಯಲ್ಲೇ ರಕ್ತನಿಧಿ ಕೇಂದ್ರ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು. ಯಳಂದೂರಿನ ಶ್ರೀನಿವಾಸ ನಾಯಕ ೆನ್ ಮಾಡಿ, ಕಬಿನಿ ನಾಲೆಯನ್ನು ಕೊಳ್ಳೇಗಾಲ ವಿಭಾಗದಿಂದ ತಿ.ನರಸೀಪುರ ವಿಭಾಗಕ್ಕೆ ಬದಲಾಯಿಸಲಾಗಿದೆ. ಇದರಿಂದ ರೈತರಿಗೆ ಸಮಸ್ಯೆ ಹೇಳಿಕೊಳ್ಳಲು ಆಗುವುದಿಲ್ಲವೆಂದು ತಿಳಿಸಿದರು. ಸಂತೇಮರಹಳ್ಳಿ ಬಳಿಯ ಕಬಿನಿ ನಾಲೆಗೆ ತಡೆಗೋಡೆ ಇಲ್ಲ. ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಿದೆ ಎಂದು ಕರೆ ಬಂತು. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಬೇಕು. ಗುಂಡ್ಲುಪೇಟೆಯ ತೋಟದ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಇರಸವಾಡಿ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ, ಶಾಲೆಯಲ್ಲಿ ಶೌಚಗೃಹ ಸೌಲಭ್ಯವಿಲ್ಲ. ರಸ್ತೆ ನಿರ್ಮಾಣವಾಗಿಲ್ಲ. ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದವು. ಎಲ್ಲರಿಗೂ ಸಾವಧಾನವಾಗಿ ಉತ್ತರಿಸಿದ ಡಿಸಿ ಶ್ರೀರೂಪಾ ಸಮಸ್ಯೆಗಳನ್ನು ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ಭರವಸೆ ನೀಡಿದರು.