ಮುಳ್ಳೂರು ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಎಚ್.ಕೆ ಮಹಾನಂದ ಅವರನ್ನು ಸನ್ಮಾನಿಸಿಲಾಯಿತು. ಎಚ್.ಸಿ ಮಹದೇವಪ್ಪ, ಎ.ಆರ್.ಕೃಷ್ಣಮೂರ್ತಿ, ಬಂತೆ ಭೋಧಿರತ್ನ, ಶಶಿಧರ್, ಎಚ್.ಕೆ ಮಹಾನಂದ್ ಇತರರು ಇದ್ದರು. 
ಚಾಮರಾಜನಗರ

ಬದಲಾವಣೆ ಮಾಡಬೇಕೆಂದವರ ಕೈಯಲ್ಲಿದೆ ಸಂವಿಧಾನ

ಪ್ರಮುಖ ಮುಖ್ಯಾಂಶಗಳು

  • ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ
  • ಮುಳ್ಳೂರು ಗ್ರಾಮ
ಕೊಳ್ಳೇಗಾಲ: ಸಂವಿಧಾನ ಬದಲಾವಣೆ ಮಾಡಬೇಕೆಂದು ಹೇಳುತ್ತಿದ್ದವರು ಈಗ ಸಂವಿಧಾನವನ್ನು ಕೈಯಲ್ಲಿ ಹಿಡಿದಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಪೀಠಿಕೆಯನ್ನು ಬಹುತೇಕ ಶಾಸಕರೇ ಓದಿರಲಿಲ್ಲ. ಕಾನೂನು ಮಾಡುವ ಶಾಸಕರಿಗೆ ಈ ಬಗ್ಗೆ ಗೊತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ನಾನು ಮಂತ್ರಿಯಾದ ಬಳಿಕ ಜನರ ಹಕ್ಕುಗಳನ್ನು ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಆಲೋಚಿಸಿ ಸಂವಿಧಾನ ಪೀಠಿಕೆಯನ್ನು ಓದಬೇಕೆಂಬ ತೀರ್ಮಾನ ಕೈಗೊಂಡೆ ಎಂದರು.
ದೇಶದಲ್ಲಿ ಯಾರ್ಯಾರು ಸಂವಿಧಾನ ಬದಲಿಸಬೇಕು, ನಾವು ಬಂದಿರುವುದೇ ಬದಲಿಸಲು ಎಂದು ಹೇಳುತ್ತಿದ್ದರೋ ಅವರ ಕೈಯಲ್ಲಿ ಸಂವಿಧಾನವಿದೆ. ಸಂವಿಧಾನಕ್ಕಿಂತ ಮೇಲೆ ಯಾರೂ ಇಲ್ಲ. ಎಲ್ಲ ಧರ್ಮಗಳು, ಜನರು ಸಂವಿಧಾನಕ್ಕೆ ಅಧೀನರು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದರು.
ಸ್ವಾತಂತ್ರೃ, ಸಮಾನತೆ, ಭಾತೃತ್ವದ ಆಶಯವಿರ ವ ಸಂವಿಧಾನದ ತಳ ಹದಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಿಂತಿದೆ. ಅಂಬೇಡ್ಕರ್ ಅವರು ಸಂವಿಧಾನ ಮೂಲಕ ದೇಶದ ಪ್ರತಿ ಪ್ರಜೆಗೂ ಹಕ್ಕು, ಕರ್ತವ್ಯ, ಮೂಲ ಸೌಲಭ್ಯ ಮತ್ತು ಸಮಾನ ಅವಕಾಶವನ್ನು ದೊರಕಿಸಿ ಕೊಟ್ಟಿದ್ದಾರೆ. ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಅಂಬೇಡ್ಕರ್ ತಮ್ಮ ವಿದ್ವತ್ತನ್ನು ಉಪಯೋಗಿಸಿದ್ದಾರೆ ಎಂದು ಹೇಳಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಮೈಸೂರಿನ ಮಹಾರಾಜ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿಪಿನ್ ನಾಗರಾಜು ಮಾತ ನಾಡಿದರು. 2ನೇ ಬಾರಿಗೆ ಮುಖ್ಯಮಂತ್ರಿ ಪದಕ ಪಡೆದ ಬೆಂಗಳೂರಿನ ಸಿಸಿಬಿ ಎಸಿಪಿ ಎಚ್.ಕೆ ಮಹಾನಂದ ಅವರನ್ನು ಸನ್ಮಾನಿ ಸಲಾಯಿತು. ವಿವಿಧ ಕೋಮಿನ ಯಜಮಾನರು, ಶೈಕ್ಷಣಿಕವಾಗಿ ಸಾಧನೆ ಮಾಡಿದ ಗ್ರಾಮದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಜೃಂಭಣೆಯ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಮುಂಭಾಗದಿಂದ ತೆರೆದ ವಾಹನದಲ್ಲಿ ಅಂಬೇಡ್ಕರ್‌ರ ಭಾವಚಿತ್ರ ಮೆರವಣಿಗೆಗೆ ಗ್ರಾಮದ ಯಜಮಾನರು ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಯುವಕರು ಕುಣಿದು ಕುಪ್ಪಳಿಸಿದರು.
ತಿ.ನರಸೀಪುರ ಕುದ್ಲೂರು ನಳಂದ ಬುದ್ಧ ವಿಹಾರದ ಪೂಜ್ಯ ಬಂತೆ ಭೋಧಿರತ್ನ, ಶಾಸಕ ಎ.ಆರ್.ಕೃಷ್ಣಮೂರ್ತಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಧರ್ಮೇಂದ್ರ, ನಿವೃತ್ತ ಉಪ ಪೊಲೀಸ್ ಅಧೀಕ್ಷಕ ಪಿ.ಎಂ. ಸಿದ್ದರಾಜು, ಗ್ರಾಮದ ಯಜಮಾನರಾದ ಬಸವಣ್ಣ, ದೊರೆರಾಜು, ವಿಜಯರಾಜ್, ನಂಜುಂಡಸ್ವಾಮಿ, ನಂಜಯ್ಯ, ಮುಖಂಡ ಶಿವಮಲ್ಲು, ಜಿಪಂ ಮಾಜಿ ಸದಸ್ಯ ಕಮಲ್ ನಾಗರಾಜು,ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ಸದಸ್ಯರು ಇದ್ದರು.