ಗುಂಡ್ಲುಪೇಟೆ ಪಟ್ಟಣದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಾಲ್ಮೀಕಿ ಭವನವನ್ನು ಎಚ್.ಎಂ.ಗಣೇಶಪ್ರಸಾದ್ ವೀಕ್ಷಿಸಿದರು. ಎನ್.ಕುಮಾರ್, ಕಾರ‌್ಗಳ್ಳಿ ಸುರೇಶ್, ರಾಚನಾಯಕ, ಸಿದ್ದರಾಜ ನಾಯಕ, ವೆಂಕಟೇಶ ನಾಯಕ, ಲಿಂಗರಾಜು, ಆಸ್ಪತ್ರೆ ರಾಮು, ಮಹದೇವ ನಾಯಕ, ಮಾಧು ಇದ್ದರು. 
ಚಾಮರಾಜನಗರ

ತಂದೆ ಇದ್ದಾಗ ಪ್ರಾರಂಭವಾಗಿದ್ದ ಭವನ ಇದೀಗ ಪೂರ್ಣ

ಗುಂಡ್ಲುಪೇಟೆ: ದಿ.ಮಹದೇವಪ್ರಸಾದ್ ಅವರ ಅವಧಿಯಲ್ಲಿ ಪ್ರಾರಂಭವಾಗಿದ್ದ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ನನ್ನ ಅವಧಿಯಲ್ಲಿ ಪೂರ್ಣಗೊಂಡಿರುವುದು ಖುಷಿ ತಂದಿದೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ 14ನೇ ವಾರ್ಡ್‌ನಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಾಲ್ಮೀಕಿ ಭವನವನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿ, ಪಟ್ಟಣದಲ್ಲಿ ನನ್ನ ತಂದೆ ಅವಧಿಯಲ್ಲಿ ಆರಂಭವಾಗಿದ್ದರೂ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಮುಗಿದು ನನ್ನ ಅವಧಿಯಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ. ಏ.21ರಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಂಡ್ಲುಪೇಟೆಗೆ ಆಗಮಿಸುತ್ತಿದ್ದು, ಅಂದೇ ಭವನವನ್ನು ಸಹ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಸಮುದಾಯದ ಮುಖಂಡರ ಕೋರಿಕೆ ಮೇರೆಗೆ 6 ಹೆಚ್ಚುವರಿ ಕೊಠಡಿ, ಪಾಕಿರ್ಂಗ್, ಟೈಲ್ಸ್, ಕಾಂಪೌಂಡ್ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ನೀಡಲಾಗುವುದು. ಈಗಾಗಲೇ ಭವನ ಬಹುತೇಕ ಕೆಲಸ ಮುಗಿದಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಪುರಸಭೆ ಅನುದಾನ ನೀಡಲಾಗಿದ್ದು, ಶೀಘ್ರ ರಸ್ತೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಬಾಕಿ ಇರುವ ಸಣ್ಣಪುಟ್ಟ ಕೆಲಸಗಳನ್ನು ಏ.21ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಕೆಆರ್‌ಡಿಐಎಲ್ ಸಹಾಯಕ ನಿರ್ದೇಶಕ ಪ್ರಸನ್ನ ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಎನ್.ಕುಮಾರ್, ಮಾಜಿ ಉಪಾಧ್ಯಕ್ಷ ಕಾರ‌್ಗಳ್ಳಿ ಸುರೇಶ್, ಮುಖಂಡರಾದ ರಾಚನಾಯಕ, ಸಿದ್ದರಾಜ ನಾಯಕ, ವೆಂಕಟೇಶ ನಾಯಕ, ಲಿಂಗರಾಜು, ಆಸ್ಪತ್ರೆ ರಾಮು, ಮಹದೇವ ನಾಯಕ, ಮಾಧು, ಚಿಕ್ಕಾಟಿ ರಂಗನಾಯಕ, ಬೇರಂಬಾಡಿ ರಂಗಪ್ಪ, ಪಿಣ್ಣನಾಯಕ, ಹಾಲಮಾದ ನಾಯಕ, ಕರವೇ ರಾಜೇಂದ್ರ ವಿ.ನಾಯಕ. ಡಾ.ರಾಜೇಶ ನಾಯಕ ಇದ್ದರು.