ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಸಂಘ ಬದ್ಧ
- ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಮಂಜುನಾಥ್ ಅಭಿಪ್ರಾಯ
- ಮಹಾಸಭಾಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
- ಸಮುದಾಯದ ಅಭಿವೃದ್ಧಿಗಾಗಿ ಪಂಚ ಕಾರ್ಯಕ್ರಮ
ಚಾಮರಾಜನಗರ: ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಸಂಘಟನೆ ಬದ್ಧವಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಮಂಜುನಾಥ್ ಆಚಾರ್ ತಿಳಿಸಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ನೇತೃತ್ವದಲ್ಲಿ ಜ.11 ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ಅಭಿವೃದ್ಧಿಗಾಗಿ ಪಂಚ ಕಾರ್ಯಕ್ರಮಗಳನ್ನು ರೂಪಿಸಿದ್ದು, ನಮ್ಮ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಎಸ್ಟಿ ಮೀಸಲಾತಿ ಹೋರಾಟ ವಾಡುವುದರ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು ಹೋರಾಟ ರೂಪಿಸಲಾಗುವುದು. ರಾಜಕೀಯ ಸ್ಥಾನವಾನ ಪಡೆಯಲು ಸಮುದಾಯದ ಬಂಧುಗಳಲ್ಲಿ ಜಾಗತಿ ಮೂಡಿಸಲಾಗುವುದು. ಈ ನಿಟ್ಟಿನಲ್ಲಿ ಸಮುದಾಯದ ಎಲ್ಲಾ ಮುಖಂಡರು, ಮಹಿಳೆಯರು ಹಾಗೂ ಯುವಕರು ಸಂಟಿತರಾಗಿ ಮಹಾಸಭಾ ಸಂಟನೆಯನ್ನು ಬಲಪಡಿಸುವ ಕೆಲಸ ವಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನಲ್ಲಿ ವಿಶ್ವಕರ್ಮ ಸವಾಜದ ಒಳಿತಿಗಾಗಿ ಸುವಾರು 10 ಎಕರೆ ಪ್ರದೇಶದಲ್ಲಿ 50,000 ಜನ ಸೇರಿಸಿ ವಿಶ್ವಕರ್ಮ ಯಾಗ ವಾಡಲಾಗುವುದು. ವಧುವರರ ಅನ್ವೇಫಿಣ ಕಾರ್ಯಕ್ರಮ ಆಯೋಜಿಸಲಾಗುವುದು. ಉಚಿತ ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗುವುದು. ವಿಶ್ವಕರ್ಮ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ಹೋರಾಟದ ರೂಪವಾಗಿ ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘದ ನಾಗೇಂದ್ರ ಆಚಾರ್, ಸ್ವಾಮಿ, ನಾಗರಾಜ್, ಸಿದ್ದಪ್ಪಾಜಿ, ಮುತ್ತುರಾಜ್, ಸುಬ್ರಹ್ಮಣ್ಯಚಾರ್, ವಾಸು ಹಾಜರಿದ್ದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಚಾಮರಾಜನಗರ ಜಿಲ್ಲಾ ಅಧ್ಯಕ್ಷರಾಗಿ ಆರ್.ಮಂಜುನಾಥ್ ಆಚಾರ್, ಜಿಲ್ಲಾ ಉಪಾಧ್ಯಕ್ಷರಾಗಿ ನಾಗೇಂದ್ರ ಸೋಮವಾರಪೇಟೆ, ಚಾಮರಾಜನಗರ ತಾಲ್ಲೂಕು ಯುವ ಟಕದ ಅಧ್ಯಕ್ಷರಾ ವೈ.ಬಿ.ಸ್ವಾಮಿ, ಯಳಂದೂರು ತಾಲೂಕು ಅಧ್ಯಕ್ಷರಾಗಿ ಎ.ಎನ್.ನಾಗರಾಜು, ಕೊಳ್ಳೇಗಾಲ ತಾಲೂಕು ಗೌರವಾಧ್ಯಕ್ಷರಾಗಿ ಮುಳ್ಳೂರು ಪಿ.ಸಿದ್ದಪ್ಪಾಜಿ, ಹನೂರು ತಾಲೂಕು ಅಧ್ಯಕ್ಷರಾಗಿ ಮುತ್ತುರಾಜ್, ಉಪಾಧ್ಯಕ್ಷರಾಗಿ ಯೋಗೇಶ್, ಹರದನಹಳ್ಳಿ ಹೋಬಳಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಚಾರ್, ಉಪಾಧ್ಯಕ್ಷರಾಗಿ ಚನ್ನಚಾರ್, ಅರವೆ ಹೋಬಳಿ ಅಧ್ಯಕ್ಷರಾಗಿ ಟಿ.ಕೆ.ವಾಸು, ಚಂದಕವಾಡಿ ಹೋಬಳಿ ಅಧ್ಯಕ್ಷರಾಗಿ ಆರ್.ಕೆಂಪರಾಜು, ಗೌರವ ಅಧ್ಯಕ್ಷರಾಗಿ ಶಶಿಕುವಾರ್ ಅವರುಗಳನ್ನು ಆಯ್ಕೆ ವಾಡಲಾಯಿತು.