ಪತ್ರಿಕಾ ಪ್ರಕಟಣೆ ಪ್ರತಿ 
ಚಾಮರಾಜನಗರ

ಬಸವ ಜಯಂತಿ ಆಚರಣೆಯಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ

ಕೊಳ್ಳೇಗಾಲ : ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಆಚರಣೆ ವಿಚಾರದಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕೊಳ್ಳೇಗಾಲ ಘಟಕದ ಸಂಘಟನಾ ಕಾರ್ಯದರ್ಶಿ ಲೋಕೇಶ್ ಆರೋಪಿಸಿದ್ದಾರೆ.
ಬಸವೇಶ್ವರರ 893ನೇ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗಿದೆ. ತಾಲೂಕು ಆಡಳಿತ ಏ.7ರಂದು ಪೂರ್ವಾಭಾವಿ ಸಭೆ ಕರೆದಿತ್ತು. ಸಭೆಗೆ ಸಮಾಜದ ಎಲ್ಲ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಮುಖಂಡರನ್ನು ಆಹ್ವಾನಿಸದೆ ಕೆಲವೇ ಕೆಲವು ಜನರನ್ನು ಕರೆದು ಸಭೆ ಮಾಡಿದ್ದು ಎಷ್ಟು ಸರಿ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ತಾಲೂಕು ರಾಷ್ಟ್ರೀಯ ಹಬ್ಬ ಮತ್ತು ಜಯಂತಿ ಆಚರಣಾ ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಅವರಿಗೆ ಸಂಘಟನೆಗಳ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂಬುದು, ಯಾವುದೇ ಜಯಂತಿಯನ್ನು ಆಚರಣೆ ಮಾಡಬೇಕಾದರೆ ಆ ಸಮಾಜದ ಮುಖಂಡರರನ್ನು ಆಹ್ವಾನಿಸಬೇಕಿಲ್ಲ ಎಂಬ ತಹಸೀಲ್ದಾರ್ ಹೇಳಿಕೆ ಎಷ್ಟು ಸರಿ. ಹಾಗಾದರೆ ಕೆಲವೇ ಕೆಲವು ಮುಖಂಡರನ್ನು ಕರೆದು ಸಭೆ ನಡೆಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಅಂತೆಯೇ ಬಸವ ಜಯಂತಿ ಕಾರ್ಯಕ್ರಮಕ್ಕೂ ಸಮಾಜದ ಪ್ರಮುಖ ಮುಖಂಡರನ್ನು ಕರೆಯದೆ ಕೆಲವು ಜನರನ್ನು ಆಹ್ವಾನಿಸಿ 30 ನಿಮಿಷದಲ್ಲಿ ಬಸವ ಜಯಂತಿ ಮುಗಿಸಲಾಗಿದೆ. ಕಾರ್ಯಕ್ರಮವನ್ನು 11 ಗಂಟೆಗೆ ನಿಗದಿ ಮಾಡಿ ಗಂಟೆಗಟ್ಟಲೇ ತಡವಾಗಿ ಪ್ರಾರಂಭಿಸಿದ್ದು ನಿರ್ಲಕ್ಷ್ಯವನ್ನು ತೋರುತ್ತದೆ ಎಂದು ಕಿಡಿಕಾರಿದ್ದಾರೆ.
20ಕೆಜಿಎಲ್-2