ಹೊಗೇನಕಲ್ ಫಾಲ್ಸ್‌ನ ಕಾವೇರಿ ನದಿಯಲ್ಲಿ ಪ್ರಾಣಾಪಾಯದಿಂದ ಪಾರಾದ ನಾಲ್ವರು.  
ಚಾಮರಾಜನಗರ

ಈಜಲು ತೆರೆಳಿದ್ದವ ಸೆಳೆತಕ್ಕೆ ಸಿಲುಕಿ ಮೃತ

ಪ್ರಜ್ವಲ್.ಎನ್
ಹನೂರು: ತಾಲೂಕಿನ ಹೊಗೇನಕಲ್ ಫಾಲ್ಸ್‌ನ ಕಾವೇರಿ ನದಿಯಲ್ಲಿ ಶನಿವಾರ ಈಜಲು ತೆರೆಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಕಣ್ಮರೆಯಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ನಂದೂಗೂಡು ಹೋಬಳಿಯ ಕುರಹಟ್ಟಿ ಗ್ರಾಮದ ಶಶಿಕುಮಾರ್ (36) ನಾಪತ್ತೆಯಾದವರು.
ಕುರಹಟ್ಟಿ ಗ್ರಾಮದ ಸ್ನೇಹಿತರಾದ ದೇವರಾಜು, ಲೋಕೇಶ್, ಕಿರಣ್‌ಮೂರ್ತಿ ಹಾಗೂ ಮಧು ಅವರ ಜತೆಗೂಡಿ ಮಧ್ಯಾಹ್ನ ಹೊಗೇನಕಲ್ ಫಾಲ್ಸ್‌ಗೆ ತೆರಳಿದ್ದರು. ಈ ವೇಳೆ ಸಮೀಪದ ಮಾರಿಕೊಟ್ಟಯಂ ಬಳಿಯ ಕಾವೇರಿ ನದಿಯಲ್ಲಿ ಎಲ್ಲರ ಜತೆಗೂಡಿ ಈಜಲು ಕಾವೇರಿ ನದಿಗೆ ಇಳಿದಿದ್ದರು. ಈ ವೇಳೆ ನೀರಿನ ಸುಳಿಗೆ ಸಿಲುಕಿ ಕಣ್ಮರೆಯಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇನ್ನುಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮ.ಬೆಟ್ಟ ಪೊಲೀಸರು ಮಾಹಿತಿ ಪಡೆದು ನಾಪತ್ತೆಯಾದವನ ಪತ್ತೆಗೆ ಹುಡುಕಾಟ ನಡೆಸಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.