ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮಕ್ಕೆ ಶುಕ್ರವಾರ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ಅಖಲ ಭಾರತ ವೀರ ಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಪದಾಧಿಕಾರಿಗಳು ಮತ್ತು ವಿವಿಧ ಸಮುದಾಯ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.
ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮಕ್ಕೆ ಶುಕ್ರವಾರ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಪದಾಧಿಕಾರಿಗಳು ಮತ್ತು ವಿವಿಧ ಸಮುದಾಯದ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.
ಜ.15 ರಿಂದ 20ರವರೆಗೆ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವ ಹಿನ್ನೆಲೆ ಪ್ರಚಾರಕ್ಕೆ ಹನೂರು ಕಡೆಯಿಂದ ಕೊಳ್ಳೇಗಾಲ ತಾಲೂಕಿನ ಕಡೆಗೆ ಆಗಮಿಸಿದ ಪ್ರಚಾರ ರಥವನ್ನು ಮಧುವನಹಳ್ಳಿ ಬಳಿ ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮದ ಮುಖಂಡರು ಬರಮಾಡಿಕೊಂಡರು. ಬಳಿಕ ಗ್ರಾಮದ ಪ್ರಮುಖ ರಸ್ತೆಯಲ್ಲಿ ರಥ ಸಾಗಿ ಕೊಳ್ಳೇಗಾಲ ಪಟ್ಟಣದಲ್ಲಿರುವ ಜೆಎಸ್‌ಎಸ್ ಕಾಲೇಜಿನ ಆವರಣ ತಲುಪಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ ತಿಮ್ಮರಾಜೀಪುರ, ಪ್ರಧಾನ ಕಾರ್ಯದರ್ಶಿ ಮಹೇಶ್, ಯುಪಿಎಸ್ ಮಹದೇವಸ್ವಾಮಿ, ಮಂಜುನಾಥ್ ಕೆಂಪನಪಾಳ್ಯ, ಬಸವರಾಜು ಬಸಪ್ಪನದೊಡ್ಡಿ, ಪ್ರಭಾಕರ್ ಮಧುವನಹಳ್ಳಿ, ಸಿದ್ದಲಿಂಗಸ್ವಾಮಿ, ಮಧುವನಹಳ್ಳಿ ನೌಡಗೌಡ, ಮುಖಂಡ ಮಲ್ಲೇಶ್, ಪ್ರಭುಸ್ವಾಮಿ, ಸುಂದ್ರಪ್ಪ, ಮಲ್ಲೇಶ್, ರವಿ, ಕಿರಣ್ , ಮಹದೇವ ಸ್ವಾಮಿ, ಅಚ್ಗಾಳ್ ಇತರರಿದ್ದರು.