ಜಿ.ಆರ್ ನಗರದ ಸೆಲ್ವಿ ಮತ್ತು ಪಳನಿಸ್ವಾಮಿ ದಂಪತಿ ಪತ್ರ ಪ್ರದರ್ಶಿಸುತ್ತಿರುವುದು.
- ಪೊಲೀಸರಿಂದ ನ್ಯಾಯ ಸಿಗದಿದ್ದಲ್ಲಿ
- ಜಿ.ಆರ್ ನಗರದ ದಂಪತಿ ಪತ್ರವನ್ನು ಮಾಧ್ಯಮಗಳ ಎದುರು ಪ್ರದರ್ಶಿಸುವ
ಹನೂರು: ಪೊಲೀಸರಿಂದ ನ್ಯಾಯ ಸಿಗದಿದ್ದಲ್ಲಿ ಕುಟುಂಬ ಸಮೇತ ಆಹ್ಮಹತ್ಯೆ ಮಾಡಿಕೊಳ್ಳುವುದಾಗಿ ಸೋಮವಾರ ತಾಲೂಕಿನ ಜಿ.ಆರ್ ನಗರದ ದಂಪತಿ ಪತ್ರವನ್ನು ಮಾಧ್ಯಮಗಳ ಎದುರು ಪ್ರದರ್ಶಿಸುವ ಮೂಲಕ ಎಚ್ಚರಿಸಿದ್ದಾರೆ.
ಗ್ರಾಮದ ತೋಟದ ಮನೆ ನಿವಾಸಿ ಸಿಲ್ವಿ ಮತ್ತು ಪಳನಿಸ್ವಾಮಿ ದಂಪತಿ ಪತ್ರ ಬರೆದಿದ್ದಾರೆ. ಗ್ರಾಮದ ಮಾದ, ಪೆರುಮಾಳ್, ಕನ್ನಮ್ಮ, ಪಳನಿ ಹಾಗೂ ಸಿದ್ದ ಅವರು ನಮ್ಮ ಮನೆಯಲ್ಲಿ 3.75 ಲಕ್ಷ ರೂ ಕಳ್ಳತನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕನ್ನಮ್ಮ ಅವರನ್ನು ಕಟ್ಟಿ ಹಾಕಿದ್ದು, ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾಗ ಪೊಲೀಸರು ದೂರು ಸ್ವೀಕರಿಸಲಿಲ್ಲ. ಪೊಲೀಸರಿಂದ ನ್ಯಾಯ ದೊರಕದ ಕಾರಣ ಕುಟುಂಬ ಸಮೇತ ಆಹ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನ್ಯಾಯ ದೊರಕಿಸಿ ಕೊಡಲು ಒಂದು ವಾರ ಕಾಲಾವಕಾಶ ನೀಡುತ್ತೇವೆ. ನ್ಯಾಯ ಸಿಗದಿದ್ದಲ್ಲಿ ಪಳನಿಸ್ವಾಮಿ, ಸೆಲ್ವಿ, ದೀಪಿಕಾ, ಶೃಂಗಾರ್ ಹಾಗೂ ವೇಲುನಾಯ್ಕ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.