ಅಜ್ಜೀಪುರ ಗ್ರಾಮದ ಜಮೀನೊಂದರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕಬ್ಬಿನ ಫಸಲು ನಾಶವಾಗಿರುವುದು.  
ಚಾಮರಾಜನಗರ

ಅಜ್ಜೀಪುರದಲ್ಲಿ ಕಬ್ಬು ಬೆಂಕಿಗಾಹುತಿ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಆರು ಎಕರೆಯಲ್ಲಿದ್ದ ಫಸಲು ನಾಶ
ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದ ಜಮೀನೊಂದರಲ್ಲಿ ಬುಧವಾರ ಆಕಸ್ಮಿಕ ಬೆಂಕಿ ತಗುಲಿ 6 ಎಕರೆಯಲ್ಲಿನ ಕಬ್ಬು ಫಸಲು ನಾಶವಾಗಿದೆ.
ಗ್ರಾಮದ ಪಳನಿಸ್ವಾಮಿ ಎಂಬುವರು ಜಮೀನನ್ನು ಗುತ್ತಿಗೆ ಪಡೆದು ಕಬ್ಬಿನ ಫಸಲನ್ನು ಬೆಳೆದಿದ್ದು, ಇನ್ನೇನು ಕಟಾವಿನ ಹಂತದಲ್ಲಿತ್ತು. ಆದರೆ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಫಸಲು ನಾಶವಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಡೆಗಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಬೆಳೆ ನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ರೈತ ಪಳನಿಸ್ವಾಮಿ ಒತ್ತಾಯಿಸಿದ್ದಾರೆ.