ಪ್ರೌಢಶಾಲಾ ವಿದ್ಯಾರ್ಥಿಗಳು ಐದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಕೊಳ್ಳೇಗಾಲದ ಬಿಇಒ ಕಚೇರಿ ಮುಂಭಾಗದಿಂದ ತೆರಳಿದರು. 
ಚಾಮರಾಜನಗರ

ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿಗಳು

ಅಭಿನಯ್ ಎಚ್.ಎಂ
ಕೊಳ್ಳೇಗಾಲ: ಕೊಳ್ಳೇಗಾಲ ಶೈಕ್ಷಣಿಕ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳು ಐದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಮಂಗಳವಾರ ತೆರಳಿದರು.
ಶಾಲಾ ಶಿಕ್ಷಣ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಶೈಕ್ಷಣಿಕ ಪ್ರವಾಸ ಆಯೋಜಿಸಲಾಗಿದ್ದು, ಪಟ್ಟಣದ ಬಿಇಒ ಕಚೇರಿ ಮುಂಭಾಗ ಮಕ್ಕಳ ಪ್ರವಾಸಕ್ಕೆ ಬಿ.ಆರ್.ಸಿ ಮಹದೇವ ಕುಮಾರ್‌ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಐದು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಸರ್ಕಾರಿ ಶಾಲೆಯ 8 ಹಾಗೂ 9 ನೇ ತರಗತಿಯಿಂದ 68 ಮಕ್ಕಳು ಹಾಗೂ ಶಿಕ್ಷಕರು ತೆರಳುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಪ್ರವಾಸದ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲಿ ಎಂದರು.
ಎಲ್ಲೆಲಿಗೆ: ಬೆಂಗಳೂರು, ತುಮಕೂರು, ಚಿತ್ರದುರ್ಗ, ಬಾದಾಮಿ, ಪಟ್ಟದಕಲ್ಲು, ಕೂಡಲ ಸಂಗಮ, ಆಲಮಟ್ಟಿ, ಹಂಪಿ ತುಂಗ ಭದ್ರಾ ಡ್ಯಾಂ ಇತರ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಿಗೆ ಮಕ್ಕಳು ಎರಡು ಬಸ್‌ಗಳಲ್ಲಿ ಪ್ರವಾಸ ತೆರಳಿದರು.
ಇಸಿಒ ಬಸವರಾಜು, ದೈಹಿಕ ಪರಿವೀಕ್ಷಕ ಉಮಾಶಂಕರ್, ಚಿಕ್ಕರಾಜು, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ ಅಕ್ಬರ್, ಪ್ರವಾಸೋದ್ಯಮ ಇಲಾಖೆಯ ಸುರೇಶ್ ಮತ್ತಿತರರಿದ್ದರು.