ಕೊಳ್ಳೇಗಾಲ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಮಾನೋಸೋತ್ಸವ 2025ರಲ್ಲಿ ಸಮಾರೋಪ ಸಮಾರಂಭ ಮತ್ತು ಗುರುವಂದನಾ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ವಾಟಾಳು ವೀರ ಸಿಂಹಾಸನ ಮಠದ ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿ ಆರ್ಶೀವಾದ ಪಡೆದರು. ಎಸ್.ದತ್ತೇಶ್‌ಕುಮಾರ್, ಎಸ್.ನಾಗರಾಜು, ಪ್ರೊ.ಎಸ್.ಪ್ರಕಾಶ್‌ಗೌಡ, ರೂಪಾ ದತ್, ಶೇಖರ ಶಾಸ್ತ್ರಿ ಇದ್ದರು. 
ಚಾಮರಾಜನಗರ

ವಿದ್ಯಾರ್ಥಿಗಳು ಶಿಕ್ಷಣ ಪಡೆದು ಜ್ಞಾನಿಗಳಾಗಿ

ಎಂ.ರವಿ

ವಾಟಾಳು ಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ

ಕೊಳ್ಳೇಗಾಲ: ವಿದ್ಯಾರ್ಥಿಗಳು ಶಿಕ್ಷಣ ಪಡೆದು ಜ್ಞಾನಿಗಳಾಗಬೇಕು ಎಂದು ವಾಟಾಳು ವೀರ ಸಿಂಹಾಸನ ಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಮಾನೋಸೋತ್ಸವ 2025ರಲ್ಲಿ ಸಮಾರೋಪ ಸಮಾರಂಭ ಮತ್ತು ಗುರುವಂದನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿ ವರ್ಷವೂ ಮಾನಸೋತ್ಸವಕ್ಕೆ ಸಂಸ್ಥೆ ನನ್ನನ್ನು ಆಹ್ವಾನಿಸುತ್ತದೆ. ಶಕ್ತಿಗೆ ಹೆಸರುವಾಸಿಯಾದ ಶಿಕ್ಷಣ ಸಂಸ್ಥೆ ಮಾನಸ ಶಿಕ್ಷಣ ಸಂಸ್ಥೆಯಾಗಿದ್ದು ಗುರು ಹಿರಿಯರು ಹಾಗೂ ಸಂಸ್ಥೆಯ ಎಲ್ಲ ಸಿಬ್ಬಂದಿಯನ್ನು ಗೌರವಿಸಿ ಶ್ರೇಷ್ಠವಾದ ಕಾರ್ಯ ಮಾಡುತ್ತಿದೆ. ಇಲ್ಲಿ ಓದುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ಜ್ಞಾನಿಗಳಾಗಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಮಾನಸ ಶಿಕ್ಷಣ ಸಂಸ್ಥೆ ಮೇಲೆ ನನಗೆ ವಿಶೇಷ ಪ್ರೀತಿ ಇದ್ದು ಈ ಸಂಸ್ಥೆ ಮತ್ತಷ್ಟೂ ಉನ್ನತವಾಗಿ ಬೆಳೆದು ಹೊರ ಜಿಲ್ಲೆಗಳಲ್ಲೂ ಸ್ಥಾಪನೆಯಾಗಲಿ ಎಂದು ಆಶೀರ್ವದಿಸಿದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ ಮಾತನಾಡಿ, ನಿವೃತ್ತಿ ಹೊಂದಿರುವ ಶಿಕ್ಷಕರನ್ನು ಗುರುವಂದನ ಕಾರ್ಯಕ್ರಮದಡಿ ಸನ್ಮಾನಿಸಿ ಗೌರವಿಸುತ್ತಿರುವ ಮಾನಸ ಸಂಸ್ಥೆಯ ನಡೆ ಶ್ಲಾಘನೀಯ ಎಂದರು.
ಈ ಸನ್ನಿವೇಶವು ಗುರುಗಳ ಮೇಲೆ ವಿದ್ಯಾರ್ಥಿಗಳಿಗೆ ಗೌರವ, ಭಾವನೆಯನ್ನು ಹೆಚ್ಚಿಸುತ್ತದೆ. ಸನ್ಮಾನ ಸ್ವೀಕರಿಸದ ಗುರುವರ್ಯರನ್ನು ಮಕ್ಕಳು ಆದರ್ಶವಾಗಿಟ್ಟು ಕೊಳ್ಳಬೇಕು ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದದವರು ಹಾಗೂ ಮಾನಸ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದವನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್, ಉಪಾಧ್ಯಕ್ಷೆ ರೂಪಾ ದತ್, ಆಡಳಿತ ಮಂಡಳಿ ಸದಸ್ಯರು, ಬೋಧಕ ಮತ್ತು ಬೋಧಕೇತರ ವೃಂದ ಇದ್ದರು.