ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಡಳಿತಾಧಿಕಾರಿ ಎಸ್.ಎಲ್. ನಯನಾ, ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಇತರರು ಪಾಲ್ಗೊಂಡಿದ್ದರು. 
ಚಾಮರಾಜನಗರ

ಯಳಂದೂರು ಪಪಂ ಆದಾಯ ಮೂಲ ಹೆಚ್ಚಿಸಲು ಕ್ರಮ

ಪ್ರಮುಖ ಮುಖ್ಯಾಂಶಗಳು

  • ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಎಸ್.ಎಲ್.ನಯನಾ
  • ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್
ಯಳಂದೂರು: ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಎಸ್.ಎಲ್.ನಯನಾ ಮತ್ತು ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ನೇತೃತ್ವದಲ್ಲಿ ವಿವಿಧ ಬಾಬ್ತುಗಳಿಗೆ ಹರಾಜು ಪ್ರಕ್ರಿಯೆ ನಡೆಯಿತು.
ಇದರಲ್ಲಿ ಕೆಲ ಆದಾಯಗಳಲ್ಲಿ ಖೋತಾ ಕಂಡು ಬಂದ ಹಿನ್ನೆಲೆಯಲ್ಲಿ ಮರು ಹರಾಜಿಗೆ ಇಡಲಾಯಿತು. ಪಟ್ಟಣ ಪಂಚಾಯಿತಿಯ ವಾರದ ಸಂತೆ 1.15 ಲಕ್ಷದ ರೂ., ಬಸ್ ನಿಲ್ದಾಣದ ಸುಂಕ ವಸೂಲಾತಿ ಹಕ್ಕು 2.77 ಲಕ್ಷ ರೂ., ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೆಲ ಸುಂಕ ವಸೂಲಾತಿ ಹಕ್ಕು 4 ಲಕ್ಷ ರೂ., ಎಲೆಕೇರಿಯ ಒಂದನೇ ಸಂಖ್ಯೆಯ ಮಾಂಸದ ಅಂಗಡಿ 26,000 ರೂ. ಕೋಳಿ ಅಂಗಡಿ 56,000 ರೂ., ಮತ್ತೊಂದು ಅಂಗಡಿ 21,000 ರೂ.ಗಳಿಗೆ ಬಿಡ್ ಕೂಗಿದರು. ಆದರೆ ಎಲೆಕೇರಿಯ ಮತ್ತೊಂದು ಕುರಿ ಮಾಂಸದ ಅಂಗಡಿಯನ್ನು 7 ಸಾವಿರ ರೂ.ಗಳಿಗೆ ಕೂಗಿದ ಹಿನ್ನೆಲೆಯಲ್ಲಿ ಇದು ಕಳೆದ ಬಾರಿಗಿಂತಲೂ ಕಡಿಮೆ ಎಂದು ಮರು ಹರಾಜು ಮಾಡಲು ನಿರ್ಧರಿಸಲಾಯಿತು.
ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ಮಾತನಾಡಿ, ನೀಡಿ ಪ್ರತಿ ವರ್ಷದಂತೆ ಈ ವರ್ಷವೂ ಪಂಚಾಯಿತಿ ವ್ಯಾಪ್ತಿಯ ವಿವಿಧ ಬಾಬ್ತುಗಳಿಗೆ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಕಳೆದ ಬಾರಿಗಿಂತ ಕಡಿಮೆ ಮೊತ್ತಕ್ಕೆ ಬಿಡ್ ಕೂಗಿರುವ ಬಾಬ್ತುಗಳನ್ನು ಮರು ಹರಾಜು ನಡೆಸಲು ತೀರ್ಮಾನಿಸಲಾಗಿದೆ. ಆದಷ್ಟು ಬೇಗ ಈ ದಿನಾಂಕ ಪ್ರಕಟಿಸಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪಟ್ಟಣ ಪಂಚಾಯಿತಿಗೆ ಆದಾಯದ ಮೂಲಗಳು ಕಡಿಮೆ ಇದೆ. ಇದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಆಹಾರ ನಿರೀಕ್ಷಕ ರಾಘವೇಂದ್ರ, ಜೆಇ ನಾಗೇಂದ್ರ, ಜಯಲಕ್ಷ್ಮಿ, ಲಕ್ಷ್ಮಿ, ರೇಖಾ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.