ಚಾಮರಾಜನಗರದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಜಿಪಂ ಸಿಇಒ ಮೋನಾ ರೋತ್ ಸ್ವಾಗತಿಸಿದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಪಾಟೀಲ್ ಮತ್ತು ಇತರರು ಇದ್ದರು.
- ವಿದ್ಯಾರ್ಥಿಗಳನ್ನು ಸ್ವಾಗತ ಕೋರಿದ ಅಧಿಕಾರಿಗಳು
- ಕನ್ನಡ ಎಕ್ಸಾಂಗೆ 11,027 ವಿದ್ಯಾರ್ಥಿಗಳಲ್ಲಿ 116 ಮಕ್ಕಳು ಗೈರು
ಚಾಮರಾಜನಗರ: ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆಯಿತು.
ಮೊದಲ ದಿನವಾದ ಬುಧವಾರ ಕನ್ನಡ ಪರೀಕ್ಷೆ ನಡೆಯಿತು. ಚಾಮರಾಜನಗರ ತಾಲೂಕಿನಲ್ಲಿ 15, ಗುಂಡ್ಲುಪೇಟೆ 10, ಹನೂರು 9, ಕೊಳ್ಳೇಗಾಲ 9, ಯಳಂದೂರು 4 ಸೇರಿದಂತೆ 47 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಯಾವುದೆ ಅಡಚಣೆ ಇಲ್ಲದಂತೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 11,02 ವಿದ್ಯಾರ್ಥಿಗಳಲ್ಲಿ 116 ಮಕ್ಕಳು ಗೈರಾದರು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು.
ಸ್ವಾಗತ ಕೋರಿದ ಅಧಿಕಾರಿಗಳು: ಚಾಮರಾಜನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ ಭಯದ ವಾತಾವರ ಹೋಗಲಾಡಿಸಿದರು. ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸಿಹಿ ಹಂಚಿದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್ ಹೇಳಿದರು. ಜಿಲ್ಲಾಧಿಕಾರಿ ಶ್ರೀರೂಪಾ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳಿಗೆ ಶುಭಕೋರಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೀವನದ ಮಹತ್ವದ ಹಂತವಾಗಿದೆ. ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದೊಂದಿಗೆ ತಯಾರಿ ಮಾಡಿಕೊಂಡು, ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸಿ, ನಿಮ್ಮ ಶ್ರಮಕ್ಕೆ ತಕ್ಕ ಲ ಸಿಗಲಿ, ನಿಮ್ಮ ಕನಸು ನನಸಾಗಲಿ ಎಂದು ಹಾರೈಸಿದರು.
ವಿದ್ಯಾರ್ಥಿಗಳನ್ನು ಪಾಲಕರು ಪರೀಕ್ಷಾ ಕೇಂದ್ರಗಳಿಗೆ ಕರೆದುಕೊಂಡು ಬಂದು ಬಿಟ್ಟರು. ಪರೀಕ್ಷೆಗೆ ತೆರಳುವ ಮೊದಲು ಅಗತ್ಯ ಕಲಿಕಾ ಸಾಮಗ್ರಿಗಳು ಇವೆಯೇ ಎಂದು ಪರೀಕ್ಷಿಸಿಕೊಳ್ಳಲು ಹೇಳಿದರು. ಮಕ್ಕಳಿಗೆ ಧೈರ್ಯದಿಂದ ಪರೀಕ್ಷೆ ಬರೆಯಲು ತಿಳಿಸಿದರು. ಪರೀಕ್ಷೆ ಮುಗಿಯುವವರೆಗೂ ಕೇಂದ್ರಗಳ ದೂರಲ್ಲಿ ಕಾದುಕೊಳಿತು ಹೊರಬಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನವಾದ ಬುಧವಾರ ಸುಸೂತ್ರವಾಗಿ ಪರೀಕ್ಷೆ ನಡೆಯಿತು. ರೋಟರಿ ಸಂಸ್ಥೆಯ ಸಹಯೋಗದಲ್ಲಿ ಜಿಪಂ ಸಿಇಒ ಮೋನಾರೋತ್ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಹೂ ಕೊಟ್ಟು ಸ್ವಾಗತಿಸಿದರು. ಸಿಹಿ ಹಂಚಿ ಶುಭಕೋರಿದರು.