ಚಾಮರಾಜನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಗುರುವಾರ ಶ್ರೀಭಗೀರಥ ಜಯಂತಿ ಕಾರ್ಯಕ್ರಮ ನಡೆಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಚಿನ್ನಸ್ವಾಮಿ, ಎ.ಎಸ್.ಗುರುಸ್ವಾಮಿ ಇತರರು ಹಾಜರಿದ್ದರು. 
ಚಾಮರಾಜನಗರ

ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶ್ರೀಭಗೀರಥ ಜಯಂತಿ

ಪ್ರಮುಖ ಮುಖ್ಯಾಂಶಗಳು

  • ಭಗೀರಥರ ಜೀವನವೇ ಒಂದು ಸಂದೇಶ
  • ಭಗೀರಥ ಮಹಾರಾಜರು ಸತತ ಪ್ರಯತ್ನದಿಂದ ಶಿವನನ್ನು ಪ್ರಾರ್ಥಿಸಿ ಧರೆಗೆ ಗಂಗೆಯನ್ನು ತಂದು ಇಡೀ ಭೂ ಮಂಡಲಕ್ಕೆ ಒಳಿತನ್ನು ಮಾಡಿದರು
ಚಾಮರಾಜನಗರ: ಶ್ರೀಭಗೀರಥ ಮಹರ್ಷಿಗಳ ಆದರ್ಶ ಗುಣಗಳನ್ನು ಸಮಾಜದ ಒಳಿತಿಗಾಗಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಭಗೀರಥರ ಜೀವನವೇ ಒಂದು ಸಂದೇಶ. ಅವರ ರೀತಿ ಪ್ರಯತ್ನಗಳನ್ನು ಕೈಗೊಳ್ಳಲು ಅಚಲ ನಿಲುವನ್ನು ಹೊಂದಬೇಕು ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಭಗೀರಥ ಮಹಾರಾಜರು ಸತತ ಪ್ರಯತ್ನದಿಂದ ಶಿವನನ್ನು ಪ್ರಾರ್ಥಿಸಿ ಧರೆಗೆ ಗಂಗೆಯನ್ನು ತಂದು ಇಡೀ ಭೂ ಮಂಡಲಕ್ಕೆ ಒಳಿತನ್ನು ಮಾಡಿದರು ಎಂದು ಹೇಳಿದರು. ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಚಿನ್ನಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್, ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಕುದರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸೋಮೇಶ್ವರ್, ಸದಸ್ಯರಾದ ಮರಿಯಾಲದ ಹುಂಡಿ ಕುಮಾರ್ ಕುಮಾರ್ ಸ್ವಾಮಿ ಮತ್ತು ಇತರರು ಇದ್ದರು.