ಶನಿ ಅಮಾವಾಸ್ಯೆ ಹಿನ್ನೆಲೆ ಕೊಳ್ಳೇಗಾಲ ಪಟ್ಟಣದ ಮರಡಿಗುಡ್ಡದ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೊಳ್ಳೇಗಾಲ: ಶನಿಅಮಾವಾಸ್ಯೆ ಹಿನ್ನೆಲೆಯಲ್ಲಿ ಪಟ್ಟಣದ ಮರಡಿಗುಡ್ಡದ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕಾರ್ಯ ಜರುಗಿತು.
ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆಯಿಂದ ರುದ್ರಾಭೀಷೇಕ, ಮಹಾಮಂಗಳಾರತಿ ನಡೆಸಿದರು. ಭಕ್ತರು ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದರು. ಅರ್ಚನೆ ಮಾಡಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕೈಂಕರ್ಯವನ್ನು ಅರ್ಚಕ ಶ್ರೀನಿವಾಸ್ ಶಾಸ್ತ್ರಿ ನೆರವೇರಿಸಿಕೊಟ್ಟರು.
ಈ ವೇಳೆ ದೇವಾಲಯ ಪಕ್ಕದಲ್ಲಿ ಶ್ರೀಮಹದೇಶ್ವರ ಅನ್ನದಾಸೋಹ ಸಮಿತಿಯ ರಾಜು, ವಿಜಯ್, ಸುರೇಶ್, ಭಗತ್ ಸತ್ಯ, ಮಹೇಶ್ ಇತರೆ ಸದಸ್ಯರು ದಾನಿಗಳ ಸಹಕಾರದ ಮೂಲಕ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.