ಗುಂಡ್ಲುಪೇಟೆಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶ್ರೀ ಭಾವಸಾರ್ ಕ್ಷತ್ರಿಯ ಸಮಾಜದ ವತಿಯಿಂದ ವಿಶೇಷ ಪೂಜೆ ಆಯೋಜಿಸಲಾಗಿತ್ತು. 
ಚಾಮರಾಜನಗರ

ಚಾಮುಂಡೇಶ್ವರಿಗೆ ವಿಶೇಷ ಪೂಜೆ

ಎಂ.ರವಿ

ಗುಂಡ್ಲುಪೇಟೆ: ಆಷಾಢ ಮಾಸದ ಶುಕ್ರವಾರದ ಅಂಗವಾಗಿ ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶ್ರೀ ಭಾವಸಾರ್ ಕ್ಷತ್ರಿಯ ಸಮಾಜದ ವತಿಯಿಂದ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾದರು.
ಈ ಅಂಗವಾಗಿ ಪಟ್ಟಣದ ಮೈಸೂರು ರಸ್ತೆಲ್ಲಿರುವ ನಂದಿನಿ ಕ್ಷೀರ ಕೇಂದ್ರದ ಬಳಿ ಚಾಮುಂಡೇಶ್ವರಿ ಯುವಕರ ಬಳಗದ ವತಿಯಿಂದ ಕಡೆಯ ಚಾಮುಂಡೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಿದರು.