ಯುಗಾದಿ ಹಬ್ಬಂದ ಶ್ರೀ ರಾಮೆಶ್ವರ ದೇವರನ್ನು ಹೂವಿನಿಂದ ಅಲಂಕಾರ ಮಾಡಲಾಯಿತು. 
ಚಾಮರಾಜನಗರ

ಶ್ರೀ ರಾಮೆಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಗುಂಡ್ಲುಪೇಟೆ: ಯುಗಾದಿ ಹಬ್ಬದ ಅಂಗವಾಗಿ ಪಟ್ಟಣ ಶ್ರೀರಾಮೆಶ್ವರ ದೇವಾಲಯದಲ್ಲಿ ಗುರುವಾರ ವಿಶೇಷ ಪೂಜೆ ಹಾಗೂ ಪಂಚಾಂಗ ಶ್ರವಣ ಮಾಡಲಾಯಿತು.
ಶ್ರೀ ಪರಾಭವ ನಾಮಸಂವತ್ಸರದ ಅಂಗವಾಗಿ ಪ್ರಧಾನ ಅರ್ಚಕ ಶಂಕರನಾರಾಯಣ ಅವರ ನೇತೃತ್ವದಲ್ಲಿ ಬೆಳಗಿನ ಜಾವ ಗಣಪತಿ ಪೂಜೆ ನವಗ್ರಹ ಪೂಜೆ, ಶಿವನಿಗೆ ಮಂಗಳ ದ್ರವ್ಯಗಳಿಂದ ಅಭಿಷೇಕ ನಂತರ ಅರಿಶಿಣದಿಂದ ಮತ್ತು ನೂತನ ವಸ್ತ್ರದಿಂದ ಅಲಂಕರಿಸಿ ನೂತನ ಪಂಚಾಂಗಕ್ಕೆ ಪೂಜೆ ಮಾಡಿ ಈ ವಷರ್ದ ಯುಗಾದಿ ಹಬ್ಬದ ಫಲಾಫಲಗಳನ್ನು ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ತಿಳಿಸಲಾಯಿತು. ಎಲ್ಲರಿಗೂ ಪ್ರಸಾದವಾಗಿ ಬೇವುಬೆಲ್ಲ ವಿತರಿಸಲಾಯಿತು.