ಗುಂಡ್ಲುಪೇಟೆ ಪಟ್ಟಣದಲ್ಲಿ ಶ್ರೀರಾಮನವಮಿಯ ಅಂಗವಾಗಿ ಮಜ್ಜಿಗೆ ಪಾನಕ ಹಾಗೂ ಕೋಸಂಬರಿಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು. 
ಚಾಮರಾಜನಗರ

ರಘುಕುಲ ತಿಲಕನಿಗೆ ವಿಶೇಷ ಅಲಂಕಾರ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಸೀತಾ ಲಕ್ಷ್ಮಣ ಸಮೇತ ಶ್ರೀ ಕೋದಂಡರಾಮ ದೇವಾಲಯದಲ್ಲಿ ವಿಶೇಷ
ಗುಂಡ್ಲುಪೇಟೆ: ಶ್ರೀ ರಾಮನವಮಿ ಅಂಗವಾಗಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಮುಖ್ಯ ರಸ್ತೆಯಲ್ಲಿರುವ 14ನೇ ಶತಮಾನದ ಸೀತಾ ಲಕ್ಷ್ಮಣ ಸಮೇತ ಶ್ರೀ ಕೋದಂಡರಾಮ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಶಂಕರನಾರಾಯಣಾ ಜೋಯಿಸ್ ನೇತೃತ್ವದಲ್ಲಿ ಬೆಳಗಿನ ಜಾವದಿಂದಲೇ ಶ್ರೀರಾಮನಿಗೆ ಎಣ್ಣೆಯಿಂದ ಅಭ್ಯಂಜನ ಸ್ನಾನ ನಂತರ ಮಂಗಳ ದ್ರವ್ಯಗಳಿಂದ ಅಭಿಷೇಕ ಮಾಡಿ ನೂತನ ವಸ್ತ್ರ ಹಾಗೂ ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. 49 ವರ್ಷಗಳ ಹಿಂದೆ ನಡೆಸಲಾಗುತ್ತಿದ್ದ ದಿವ್ಯ ರಥೋತ್ಸವವನ್ನು ಮುಂದಿನ ಬಾರಿ ಮಾಡುವ ಸಂಕಲ್ಪದೊಂದಿಗೆ ಮಹಾಮಂಗಳಾರತಿ ಮಾಡಿ ಭಕ್ತಾದಿಗಳಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.