ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆದ ಶಾ.ಮುರಳಿ, ಚಾ.ವೆಂ.ರಾಜಗೋಪಾಲ್, ಕೊಂಬುಕಹಳೆ ರವಿಚಂದ್ರ ಪ್ರಸಾದ್, ಮಹೇಶ್, ಮುತ್ತುರಾಜ್, ಆಟೋ ನಿಂಗರಾಜು, ಹೊಮ್ಮ ಲೋಕೇಶ್, ಲಿಂಗರಾಜು, ರಾಚಪ್ಪ, ಅಮಚವಾಡಿ ರಾಜು, ನಾಗರಾಜು, ಮುತ್ತುರಾಜು, ರಂಗಸ್ವಾಮಿ, ಚಂದಕವಾಡಿ ರಾಜಣ್ಣ, ಪಣ್ಯದಹುಂಡಿ ರಾಜು, ತಾಂಡವಮೂರ್ತಿ, ನಾಗ ಮತ್ತು ಇತರರು ಭಾಗವಹಿಸಿದ್ದರು. 
ಚಾಮರಾಜನಗರ

ತಮಿಳುನಾಡು ಸಿಎಂ ವಿಜಯ್ ವಿರುದ್ಧ ಕಿಡಿ

ಪ್ರಮುಖ ಮುಖ್ಯಾಂಶಗಳು

  • ಮೇಕೆದಾಟು ಯೋಜನೆ ಜಾರಿಗೆ ಅಡ್ಡಗಾಲು ಹಾಕದಿರಲು ಆಗ್ರಹ
  • ಕರ್ನಾಟಕ ಸೇನಾ ಪಡೆ ಕಾರ್ಯಕರ್ತರಿಂದ ಪ್ರತಿಭಟನೆ
ಚಾಮರಾಜನಗರ: ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮೇಕೆದಾಟು ಯೋಜನೆ ಜಾರಿ ಮಾಡೇ ಮಾಡುತ್ತೇವೆ ಎಂದು ೋಷಣೆ ಮೊಳಗಿಸಿದರು. ತಮಿಳುನಾಡಿ ಸಿಎಂ ವಿಜಯ್ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಕರ್ನಾಟಕ ಸೇನಾ ಪಡೆದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುವುದನ್ನು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್‌ನದಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಹಾಗಿದ್ದರೂ ಸಿಎಂ ವಿಜಯ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ, ಕರ್ನಾಟಕದ ಡಿಪಿಆರ್ ಬದಲಾವಣೆ ಮಾಡಿ ಎಂದು ಕೋರಿರುವುದು ಸರಿಯಲ್ಲ ಎಂದು ಹೇಳಿದರು.
ತಮಿಳುನಾಡು ಸಿಎಂ ವಿಜಯ್ ನಿಲುವು ಸರಿಯಾಗಿಲ್ಲ. ಅವರು ಸಿಎಂ ಆದಾಗ ಸಂತೋಷ ವ್ಯಕ್ತಪಡಿಸಲಾಗಿತ್ತು. ಈ ಹಿಂದೆ ತಮಿಳುನಾಡಿನಲ್ಲಿ ಕರುಣಾನಿಧಿ, ಜಯಲಲಿತಾ ಸಿಎಂ ಆಗಿದ್ದಾಗ ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕದೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿದ್ದರು. ವಿಜಯ್ ಸಿಎಂ ಆದ ಬಳಿಕ ಕರ್ನಾಟಕದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಅವರು ಹಿಂದಿನ ಸಿಎಂಗಳ ಅಭ್ಯಾಸವನ್ನೇ ಮುಂದುವರೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಸೌಲಭ್ಯ ಸಿಕ್ಕಂತಾಗುತ್ತದೆ. ತಮಿಳುನಾಡಿನ ಸಿಎಂ ವಿಜಯ್ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸಬಾರದು. ಮುಂದಿನ ದಿನಗಳಲ್ಲಿ ತಮಿಳುನಾಡಿನ ಕಡೆಯಿಂದ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತವಾದರೆ ಕನ್ನಡ ಪರ ಹೋರಾಟಗಾರರು ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆದ ಶಾ.ಮುರಳಿ, ಚಾ.ವೆಂ.ರಾಜಗೋಪಾಲ್, ಕೊಂಬುಕಹಳೆ ರವಿಚಂದ್ರ ಪ್ರಸಾದ್, ಮಹೇಶ್, ಮುತ್ತುರಾಜ್, ಆಟೋ ನಿಂಗರಾಜು, ಹೊಮ್ಮ ಲೋಕೇಶ್, ಲಿಂಗರಾಜು, ರಾಚಪ್ಪ, ಅಮಚವಾಡಿ ರಾಜು, ನಾಗರಾಜು, ಮುತ್ತುರಾಜು, ರಂಗಸ್ವಾಮಿ, ಚಂದಕವಾಡಿ ರಾಜಣ್ಣ, ಪಣ್ಯದಹುಂಡಿ ರಾಜು, ತಾಂಡವಮೂರ್ತಿ, ನಾಗ ಮತ್ತು ಇತರರು ಭಾಗವಹಿಸಿದ್ದರು.