ಚಾಮರಾಜನಗರದ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ಅನುಭವ ಮಂಟಪದ ಎದುರು ಗುರುವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಅನಿಮಿಯಾ ತಡೆಗಟ್ಟಲು ಕಾರ್ಯಕ್ರಮಕ್ಕೆ ನಗರದ ವಿರಕ್ತ ಮಠದ ಪೀಠಾಧಿಪತಿ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲದ ಶ್ರೀಮುಘರಾಜೇಂದ್ರ ಮಹಾಸಂಸ್ಥಾನ ಮಠದ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಎಚ್.ಎಸ್.ಮಹದೇವಸ್ವಾಮಿ, ದೊಡ್ಡರಾಯಪೇಟೆ ಗಿರೀಶ್, ರಾಮಸಮುದ್ರ ಬಾಬು,ಭಾಗ್ಯ, ನಿರ್ವಾಹಕ ಮಹೇಶ್, ಗುರುಸ್ವಾಮಿ, ಮಂಜುನಾಥ್ ಸಿದ್ದಮಲ್ಲಪ್ಪ ಇತರರು ಹಾಜರಿದ್ದರು. 
ಚಾಮರಾಜನಗರ

ಬಸವ ಸ್ಮರಣೆಯೊಂದಿಗೆ ಸಮಾಜ ಸೇವೆ

ಪ್ರಮುಖ ಮುಖ್ಯಾಂಶಗಳು

  • ಜಯಂತ್ಯುತ್ಸವದ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರ
  • ಪೂಜೆ ಸಲ್ಲಿಸಿ ಅನ್ನ ದಾಸೋಹಕ್ಕೆ ಚಾಲನೆ ಕೊಟ್ಟ ಇಬ್ಬರು ಶ್ರೀಗಳು
ಚಾಮರಾಜನಗರದ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ಅನುಭವ ಮಂಟಪದ ಎದುರು ಗುರುವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಅನಿಮಿಯಾ ತಡೆಗಟ್ಟಲು ಕಾರ್ಯಕ್ರಮಕ್ಕೆ ನಗರದ ವಿರಕ್ತ ಮಠದ ಪೀಠಾಧಿಪತಿ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲದ ಶ್ರೀಮುಘರಾಜೇಂದ್ರ ಮಹಾಸಂಸ್ಥಾನ ಮಠದ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಎಚ್.ಎಸ್.ಮಹದೇವಸ್ವಾಮಿ, ದೊಡ್ಡರಾಯಪೇಟೆ ಗಿರೀಶ್, ರಾಮಸಮುದ್ರ ಬಾಬು,ಭಾಗ್ಯ, ನಿರ್ವಾಹಕ ಮಹೇಶ್, ಗುರುಸ್ವಾಮಿ, ಮಂಜುನಾಥ್ ಸಿದ್ದಮಲ್ಲಪ್ಪ ಇತರರು ಹಾಜರಿದ್ದರು.
ಚಾಮರಾಜನಗರ: ನಗರದ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠ, ಬಸವ ಬಳಗಗಳ ಒಕ್ಕೂಟದ ವತಿಯಿಂದ ಗುರುವಾರ ಆಯೋಜಿಸಿರುವ ಶ್ರೀಬಸವೇಶ್ವರರ ಜಯಂತ್ಯುತ್ಸವ ಪ್ರಯುಕ್ತ ಬಸವ ಸ್ಮರಣೆಯೊಂದಿಗೆ ಸಮಾಜ ಸೇವಾ ಕಾರ್ಯವೂ ನಡೆಯಿತು.
ಶ್ರೀಮಠದ ಅನುಭವ ಮಂಟಪದ ಎದುರು ಗುಜರಾತ್‌ನ ಶ್ರೀಮದ್ ರಾಜಚಂದ್ರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯಪುರದ ಸ್ಪಂದನ ಸ್ವಯಂ ಸೇವಾ ಸಂಸ್ಥೆ, ೇವಾರ್ಡ್-ಕೆ ಕರ್ನಾಟಕ, ಚೈತನ್ಯ ನೆಟ್‌ವರ್ಕ್, ಶ್ರೀಸಿದ್ದಮಲ್ಲೇಶ್ವರ ಸೌಹಾರ್ದ ಸಹಕಾರಿ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅನಿಮಿಯಾ ತಡೆಗಟ್ಟಲು ಅರಿವು ಮೂಡಿಸಲಾಯಿತು.
ಶಿಬಿರಕ್ಕೆ ನಗರದ ವಿರಕ್ತ ಮಠದ ಪೀಠಾಧಿಪತಿ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲದ ಶ್ರೀಮುಘರಾಜೇಂದ್ರ ಮಹಾಸಂಸ್ಥಾನ ಮಠದ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಶಿಬಿರದಲ್ಲಿ ಸಾರ್ವಜನಿಕರು ಪಾಲ್ಗೊಂಡು ಹಿಮೋಗ್ಲೋಬಿನ್ ಪರೀಕ್ಷೆ, ಅನಿಮಿಯಾ ತಪಾಸಣೆ ಮಾಡಲಾಯಿತು. ಒಟ್ಟು 1012 ಜನರು ಪರೀಕ್ಷೆಗೊಳಪಟ್ಟರು. ಹಿಮೋಗ್ಲೋಬಿನ್ ಕಡಿಮೆ ಇದ್ದ 500 ಜನರಿಗೆ ಸೂಕ್ತ ಔಷಧಿ ನೀಡಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯನಿರ್ದೇಶಕ ಎಚ್.ಎಸ್.ಮಹದೇವಸ್ವಾಮಿ, ದೊಡ್ಡರಾಯಪೇಟೆ ಗಿರೀಶ್, ಸಹಕಾರಿ ಸಂಘದ ಅಧ್ಯಕ್ಷ ರಾಮಸಮುದ್ರ ಬಾಬು, ಚೈತನ್ಯ ನೆಟ್‌ವರ್ಕ್‌ನ ಮುಖ್ಯಸ್ಥೆ ಭಾಗ್ಯ, ನಿರ್ವಾಹಕ ಮಹೇಶ್, ಗುರುಸ್ವಾಮಿ, ಮಂಜುನಾಥ್ (ಇಂಚರ ಹೋಟೇಲ್), ಸಿದ್ದಮಲ್ಲಪ್ಪ, ಆರ್.ಎಂ.ಸ್ವಾಮಿ, ಕೊಡಸೋಗೆ ಸಿದ್ದಬಸಪ್ಪ, ಕೋಡಿಮೋಳೆ ರಾಜಶೇಖರ್ ಮತ್ತು ಭಕ್ತರು ಇದ್ದರು.
ದಾಸೋಹಕ್ಕೆ ಚಾಲನೆ:
ಬಸವ ಜಯಂತಿ ಪ್ರಯುಕ್ತ ಶ್ರೀಮಠದ ಆವರಣದಲ್ಲಿ ನಡೆಯುವ ಅನ್ನ ದಾಸೋಹದ ತಯಾರಿಕಾ ಸ್ಥಳಕ್ಕೆ ನಗರ ಮತ್ತು ಮರಿಯಾಲ ಶ್ರೀಗಳು ಭೇಟಿ ನೀಡಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮೇ 21 ಮತ್ತು 22ರಂದು ನಡೆಯುವ ಈ ಸಮಾರಂಭದಲ್ಲಿ ಸಾವಿರಾರು ಜನರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.
ಪ್ರಭುಲಿಂಗಲೀಲೆ ನಾಟಕ ಪ್ರದರ್ಶನ
ಬಸವ ಜಯಂತ್ಯುತ್ಸವ ಮತ್ತು ಪೂನ್ಯದ್ವಯರ ಸಂಸ್ಮರಣೋತ್ಸವದ ಪ್ರಯುಕ್ತ ಶ್ರೀ ಸಿದ್ದಮಲ್ಲೇಶ್ವರ ಕಲಾ ಬಳಗದ ವತಿಯಿಂದ ಪ್ರಭುಲಿಂಗಲೀಲೆ ನಾಟಕ ಪ್ರದರ್ಶನ ನಡೆಯಿತು. ಕಲಾ ಬಗಳದ ಕಲಾವಿದರ ಉತ್ತಮ ಅಭಿಯನ ಭಕ್ತರನ್ನು ಮನಸೂರೆಗೊಳಿಸಿತು.