ಗುಂಡ್ಲುಪೇಟೆ ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಶ್ರೀ ಬೆಟ್ಟದ ಚಿಕ್ಕಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದೇಶ ಅವರನ್ನು ಮುಖಂಡರು ಅಭಿನಂದಿಸಿದರು. ಮಹದೇವೇಗೌಡ, ಬಸವೇಗೌಡ,ಕರೀಗೌಡ ಇತರರಿದ್ದರು.  
ಚಾಮರಾಜನಗರ

ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿದ್ದೇಶ ಆಯ್ಕೆ

ಗುಂಡ್ಲುಪೇಟೆ: ತಾಲೂಕಿನ ಕಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾದ 41 ಗ್ರಾಮಗಳಿಗೆ (ಒಕ್ಕಲು ಮನೆತನ) ಸೇರಿದ ಶ್ರೀ ಬೆಟ್ಟದ ಚಿಕ್ಕಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಹೊನ್ನಶೆಟ್ಟರಹುಂಡಿ ಗ್ರಾಮದ ಸಿದ್ದೇಶ ಅವಿರೋಧವಾಗಿ ಆಯ್ಕೆಯಾದರು.
ತಾಲೂಕಿನ ಹೊನ್ನಶೆಟ್ಟರ ಹುಂಡಿಯ ಪಟೇಲ್ ಪುಟ್ಟೇಗೌಡರ ಮನೆಯಲ್ಲಿ ನಡೆದ ಸಭೆಯಲ್ಲಿ ಮಂಡಲಿಯ ಕಾರ್ಯದರ್ಶಿ ಯೋಗಾನಂದ ಅಧ್ಯಕ್ಷರ ಆಯ್ಕೆ ನಿರ್ಣಯ ಮಂಡಿಸಿದರು.
ನಿರ್ದೇಶಕರಾದ ಹೊನ್ನಶೆಟ್ಟರ ಹುಂಡಿಯ ಮಹದೇವೇಗೌಡ, ತೆಂಕಲಹುಂಡಿಯ ಬಸವೇಗೌಡ, ಕೂಟೇಗೌಡನಹುಂಡಿಯ ಕೆ.ಬಿ.ಮಹದೇವೇಗೌಡ, ಕರೀಗೌಡ, ಹರತಲೆಯ ಕುಮಾರ್, ಮಲ್ಲಯ್ಯನಪುರದ ದಳವಾಯಿಗೌಡ, ಹಳೇಹುಂಡಿಯ ನಾಗೇಗೌಡ, ಯಡಹುಂಡಿಯ ಮಹದೇವೇಗೌಡ ಮತ್ತು ವೈ.ಬಿ.ಮಹದೇವೇಗೌಡ, ಕಲೀಗೌಡನಹಳ್ಳಿಯ ಶಿವಣ್ಣ, ಕಬ್ಬಳ್ಳಿಯ ಚಿನ್ನಸ್ವಾಮಿಗೌಡ ದೇವಾಲಯದ ಪ್ರಧಾನ ಅರ್ಚಕ ಪುಟ್ಟೇಗೌಡ ನಿರ್ಣಯಕ್ಕೆ ಬೆಂಬಲ ಸೂಚಿಸಿದರು. ಹೊನ್ನಶೆಟ್ಟರ ಹುಂಡಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.