ಖೋ ಖೋ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ಆಟಗಾರ ಚಂದನ್ ಟ್ರೋಫಿಯೊಂದಿಗೆ 
ಚಾಮರಾಜನಗರ

ಖೋ ಖೋದಲ್ಲಿ ಸಿದ್ದಯ್ಯನಪುರದ ಪ್ರತಿಭೆ ಸಾಧನೆ

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ತಂಡದಲ್ಲಿ ಆಟವಾಡಿ ಆಲ್‌ರೌಂಡರ್ ಆಗಿ ಮಿಂಚಿನ ಚಂದನ್
  • ಕುರುಬೂರು ಚೈತ್ರ ಸಾಧನೆ ನೆನಪು ಮಾಡಿದ ನಮ್ಮೂರ ಹುಡುಗ
ಚಾಮರಾಜನಗರ: ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ತಮಿಳುನಾಡು ವಿರುದ್ಧ ಗೆದ್ದ ಚಾಂಪಿಯನ್ ಆಗಿರುವ ಕರ್ನಾಟಕ ತಂಡದಲ್ಲಿ ಸಿದ್ದಯ್ಯನಪುರದ ರೈತನ ಮಗ, ಸರ್ಕಾರಿ ಶಾಲೆಯ ವಿದ್ಯಾರ್ಥಿ ಮಿಂಚಿ ಮೆರೆದು ಆಲ್‌ರೌಂಡರ್ ಆಗಿ ಹೊರಹೊಮ್ಮಿ ಸಾಧನೆ ಮಾಡಿದ್ದಾನೆ.
ಗುಜರಾತ್‌ನಲ್ಲಿ ಜ.10ರಿಂದ 14ರವರೆಗೆ ಸಬ್ ಜೂನಿಯರ್ ನ್ಯಾಷನಲ್ ಖೋ ಖೋ ಚಾಂಪಿಯನ್‌ಶಿಪ್ 2025-26 ಟೂರ್ನಿ ನಡೆಯಿತು. ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದ ತಾಲೂಕಿನ ಸಿದ್ದಯ್ಯನಪುರದ ರೈತ ಪ್ರಕಾಶ್ ಮತ್ತು ಶೋಭಾ ಪುತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಚಂದನ್ ಜಿಲ್ಲೆ ಮಾತ್ರವಲ್ಲ ರಾಜ್ಯವೇ ಹೆಮ್ಮೆ ಪಡುವಂತಾ ಆಟವಾಡಿದ್ದಾನೆ. ಅಂದು ಖೋ ಖೋ ವಿಶ್ವಕಪ್‌ನಲ್ಲಿ ಕೀರ್ತಿ ಪತಾಕೆ ಹಾರಿಸಿದ ಕುರುಬೂರಿನ ಚೈತ್ರ ದುಪ್ಪಟ್ಟು ಸಂಭ್ರಮಕ್ಕೆ ಕಾರಣವಾದರೆ, ಇಂದು ಚಂದನ್ ಮತ್ತೊಂದು ಗೆಲುವನ್ನು ಎದೆಯುಬ್ಬಿಸಿ ಬೀಗುವಂತಾಗಿದೆ.
ಆಲ್‌ರೌಂಡರ್ ಬೆಸ್ಟ್ ಪ್ಲೇಯರ್: ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಹರಿಯಾಣ, ಮಹಾರಾಷ್ಟ್ರ, ಪಂಜಾಬ್, ಡೆನ್‌ಮಾರ್ಕ್ ವಿರುದ್ಧ ಗೆದ್ದು ೈನಲ್ ಪ್ರವೇಶ ಮಾಡಿತು. ೈನಲ್‌ನಲ್ಲಿ ಬುಧವಾರ ತಮಿಳುನಾಡು ತಂಡವನ್ನು ಎದುರಿಸಿತು. ಈ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ 19-8 ಅಂಕಗಳಿಂದ ಮುನ್ನಡೆ ಸಾಧಿಸಿ ಜಯಭೇರಿ ಬಾರಿಸಿತು. ೈನಲ್ ಪಂದ್ಯದಲ್ಲಿ ಸಿದ್ದಯ್ಯನಪುರದ ಚಂದನ್ 6 ಜನ ಎದುರಾಳಿಗಳನ್ನು ಔಟ್ ಮಾಡಿ ಕರ್ನಾಟಕ ತಂಡ ದೊಡ್ಡ ಅಂಕ ಗಳಿಸಲು ಕಾರಣನಾದ. ಅಲ್ಲದೇ, ಎದುರಾಳಿಗಳು ಚಂದನ್‌ನನ್ನು ಔಟ್ ಮಾಡಲು 3 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡರು. ಚಂದನ್ ಪ್ರದರ್ಶನವನ್ನು ನೀಡಿ ಆಲ್‌ರೌಂಡ್ ಬೆಸ್ಟ್ ಪ್ಲೇಯರ್ ಪ್ರಶಸ್ತಿ ದೊರೆತಿದೆ ಎಂದು ಸಿದ್ದಯ್ಯನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ರೈತನ ಮಗನ ಕ್ರೀಡಾ ಸಾಧನೆ..
ಸಿದ್ದಯ್ಯನಪುರ ಗಟ್ಟಿತನದ ಜನರ ನೆಲ. ಗ್ರಾಮದ ಸಣ್ಣ ರೈತ ಪ್ರಕಾಶ್ ಪುತ್ರ ಚಂದನ್ ಖೋ ಖೋದಲ್ಲಿ ದೊಡ್ಡ ಸಾಧನೆ ಮಾಡಿರುವುದು ವಿಶೇಷ. ಗ್ರಾಮಸ್ಥರ ಕಾಳಜಿ, ಪ್ರೋತ್ಸಾಹಿ ಎಸ್‌ಡಿಎಂಸಿ, ಪಾಲಕ ಸ್ನೇಹಿ ಶಿಕ್ಷಕರ ಬಳಗ, ಉತ್ಸಾಹಿ ಪಿಟಿ ಮಾಸ್ಟರ್ ನಾರಾಯಣ್ ಅವರಿಂದ ಊರಿನ ಸರ್ಕಾರಿ ಶಾಲೆಯ ವಾತಾವರಣ ಉತ್ತಮವಾಗಿದೆ. ಈ ಶಾಲೆಯ ವಿದ್ಯಾರ್ಥಿಯಾಗಿರುವ ಚಂದನ್ ತಂದೆ ಪ್ರಕಾಶ್ ಎಸ್‌ಡಿಎಂಸಿ ಸದಸ್ಯರೂ ಕೂಡ ಆಗಿದ್ದಾರೆ. ಖೋ ಖೋ ಕ್ರೀಡೆಯಲ್ಲಿ ಚಂದನ್ ಹೊಂದಿದ್ದ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ತಾಲೂಕು, ಜಿಲ್ಲೆ, ವಿಭಾಗ ಮತ್ತು ಇನ್ನಿತರೆ ಮಟ್ಟಗಳಲ್ಲಿ ಆಟವಾಡಿ ಸೈ ಎನಿಸಿಕೊಂಡಿದ್ದ ಚಂದನ್ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಈಗ ಸಾಧನೆ ಮಾಡಿದ್ದಾನೆ.
ಇಂದು ರ‌್ಯಾಲಿ ಮೂಲಕ ಸ್ವಾಗತ:
ಸಾಧಕ ವಿದ್ಯಾರ್ಥಿ ಚಂದನ್ ಶುಕ್ರವಾರ ಚಾಮರಾಜನಗರಕ್ಕೆ ಆಗಮಿಸಲಿದ್ದಾನೆ. ಬೈಕ್ ರ‌್ಯಾಲಿ ಮೂಲಕ ಜಿಲ್ಲಾಡಳಿತ ಭವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಗೆ ಮೂಲಕ ಸಿದ್ದಯ್ಯನಪುರಕ್ಕೆ ತೆರೆದುಕೊಂಡು ಹೋಗಲಾಗುವುದು ಎಂದು ಮುಖಂಡ ಪರ್ವತ್‌ರಾಜ್ ತಿಳಿಸಿದ್ದಾರೆ.
ಚಂದನ್ ಆಟಗಾರನಾಗಿ ಅತ್ಯುತ್ತಮ ಕೌಶಲ್ಯವನ್ನು ಹೊಂದಿದ್ದಾನೆ. ತನ್ನ ಸಾಮರ್ಥ್ಯ ಪ್ರದರ್ಶಿಸಿ ಮಹತ್ವದ ಗೆಲುವು ದಾಖಿಸಿದ್ದಾನೆ. ಈತನ ಸಾಧನೆಗೆ ಕಾರಣರದ ಎಲ್ಲರೂ ಸ್ಮರಣೀಯರು.
-ನಾರಾಯಣ್, ದೈಹಿಕ ಶಿಕ್ಷಕ ಶಿಕ್ಷಕ, ಸಿದ್ದಯ್ಯನಪುರ ಸರ್ಕಾರಿ ಶಾಲೆ