ಯಳಂದೂರ ಸಮೀಪದ ಗೂಳೀಪುರ ಗ್ರಾಮದಲ್ಲಿ ಗುರುವಾರ ಸಂಜೆ ಮಂಟೇಸ್ವಾಮಿ ಕೊಂಡೋತ್ಸವ ಜರುಗಿತು. 
ಚಾಮರಾಜನಗರ

ಗೂಳಿಪುರದಲ್ಲಿ ಸಿದ್ದಪ್ಪಾಜಿ ಕೊಂಡೋತ್ಸವ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಯುಗಾದಿ ಹಬ್ಬದಂದು ದೇವಾಲಯ ಸಿಂಗರಿಸಿ, ರಾತ್ರಿ ಕೊಂಡಕ್ಕೆ ಅಗ್ನಿ ಸ್ಪರ್ಶಿಸಲಾಯಿತು
ಯಳಂದೂರು: ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಮಂಟೇಸ್ವಾಮಿ ಕೊಂಡೋತ್ಸವ ನಡೆಯಿತು.
ಯುಗಾದಿ ಹಬ್ಬದಂದು ದೇವಾಲಯ ಸಿಂಗರಿಸಿ, ರಾತ್ರಿ ಕೊಂಡಕ್ಕೆ ಅಗ್ನಿ ಸ್ಪರ್ಶಿಸಲಾಯಿತು. ಶುಕ್ರವಾರ ಮಂಟೇಸ್ವಾಮಿ, ಸಿದ್ದಪ್ಪಾಜಿ ದೇವರ ಕಂಡಾಯಗಳನ್ನು ಊರಿನ ಹೊರಭಾಗದ ಹರಳಿ ಕಟ್ಟೆಯ ಬಳಿ ಪೂಜಿಸಿದರು. ಕಂಡಾಯವನ್ನು ಹೊಂಬಾಳೆ, ಹೂವು, ಸಿಂಗರಿಸಿ, ಸತ್ತಿಗೆ, ಸೂರಪಾನಿ ಹಿಡಿದು ಮೆರವಣಿಗೆ ಮಾಡಲಾಯಿತು. ನಂತರ ದೇವರ ಗುಡ್ಡರು ಮತ್ತು ಭಕ್ತಾದಿಗಳು ಕೊಂಡ ಹಾಯ್ದರು. ಸಹಸ್ರಾರು ಭಕ್ತರು ಕೊಂಡೋತ್ಸವ ಕಣ್ತುಂಬಿಕೊಂಡರು. ಶ್ರೀ ಮಂಟೇಸ್ವಾಮಿ ಹಾಗೂ ಸಿದ್ದಪ್ಪಾಜಿ ಅವರ ಕಂಡಾಯಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.