ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಡೇರಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ರಾಜು ಮತ್ತು ನಿರ್ದೇಶಕರನ್ನು ಸನ್ಮಾನಿಸಲಾಯಿತು.
- ಸಂಘದ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದ ನೂತನ ಅಧ್ಯಕ್ಷ
- ಅಧ್ಯಕ್ಷ-ಉಪಾಧ್ಯಕ್ಷರಿಗೆ ನಿರ್ದೇಶಕರಿಂದ ಸನ್ಮಾನ
- ಗುಣಮಟ್ಟದ ಹಾಲು ಹಾಕಲು ಮನವಿ
ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ದಪ್ಪ, ಉಪಾಧ್ಯಕ್ಷರಾಗಿ ರಾಜು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಎಸ್.ನಾಗೇಸ್ ಅವಿರೋಧ ಆಯ್ಕೆಯನ್ನು ೋಷಿಸಿದರು. ಸಂಘದ ನೂತನ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಸಂಘದ ಅಭಿವೃದ್ಧಿಗೆ ಸರ್ವರ ಸಹಕರಿಸಬೇಕು. ಪ್ರತಿಯೊಬ್ಬರೂ ಗುಣಮಟ್ಟದ ಹಾಲನ್ನು ಹಾಕಬೇಕೆಂದು ಎಂದು ಮನವಿ ಮಾಡಿದರು. ನೂತನ ನಿರ್ದೇಶಕರಾದ ಯು.ಎಂ.ನಾಗರಾಜಪ್ಪ, ಡಿ.ಉಮೇಶ್, ಸಿದ್ದಪ್ಪ, ಬಸವಣ್ಣ, ಎಂ.ಉಮೇಶ್, ಮಹಾದೇವಯ್ಯ, ರಾಜಮ್ಮ, ಸಿದ್ದಮ್ಮ, ಸಾಕಮ್ಮ, ಸಿಇಒ ಹೇಮಂತ್, ಹಾಲು ಪರೀಕ್ಷಕ ಮಹಾದೇವ ಶೆಟ್ಟಿ, ಸಹಾಯಕ ರಾಜೇಶ್ ಮತ್ತು ಗ್ರಾಮಸ್ಥರು ಇದ್ದರು.