ತಾಲೂಕಿನ ಉತ್ತಂಬಳ್ಳಿ ಗ್ರಾಮದ ವೃತ್ತದಲ್ಲಿ ನೂತನ ಮಹರ್ಷಿ ಭಗೀರಥ ಮಹರ್ಷಿ ಅವರ ಭಾವಚಿತ್ರವುಳ್ಳ ಬೋರ್ಡ್‌ಅನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಅನಾವರಣಗೊಳಿಸಿದರು.
ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಭಾನುವಾರ ಉಪ್ಪಾರ ಸಮುದಾಯ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರ ಅಧಿಕಾರದ ಅವಧಿಯಲ್ಲಿ ಉಪ್ಪಾರ ಸಮುದಾಯ ಹಲವಾರು ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸೇವೆ ಮಾಡಲು ಅಧಿಕಾರ ಕಲ್ಪಿಸಿಕೊಟ್ಟಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಸಿ.ಪುಟ್ಟರಂಗಶೆಟ್ಟಿ ಅವರು 4 ಬಾರಿ ಶಾಸಕರಾಗಿದ್ದಾರೆ. ಅಹಿಂದ ವರ್ಗವು ಒಗ್ಗಟ್ಟಾಗಿ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಹಕಾರ ನೀಡಿದ್ದಾರೆ. ಮಂತ್ರಿಯಾಗಿ, 2 ಬಾರಿ ನಿಗಮದ ಅಧ್ಯಕ್ಷರಾಗಿದ್ದಾರೆ. ಅಂತೆಯೇ, ಈ ಹಿಂದೆ ಉಪ್ಪಾರ ನಿಗಮ ಸ್ಥಾಪನೆ ಮಾಡಿದ ಬಳಿಕ ಪ್ರಥಮ ಅಧ್ಯಕ್ಷರಾಗಿ ಮಧುವನಹಳ್ಳಿ ಶಿವಕುಮಾರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿತು. ಅದೇ ರೀತಿ ಉಪ್ಪಾರ ಜನಾಂಗದ ಯುವ ಮುಖಂಡ ಯೋಗೇಶ್ ಜಿಪಂ ಮಾಜಿ ಸದಸ್ಯರಾಗಿ ಹಾಗೂ ರಾಜೇಂದ್ರ ಗ್ಯಾರಂಟಿ ಅಧ್ಯಕ್ಷರಾಗಿ ಸ್ಥಾನಮಾನ ದೊರಕಿಸಿಕೊಡಲಾಗಿದೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಉಪ್ಪಾರ ಸಮುದಾಯದ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಉತ್ತಂಬಳ್ಳಿ ಗ್ರಾಮದಲ್ಲಿ ಭಗೀರಥರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಭಗೀರಥ ಭವನ ನಿರ್ಮಾಣಗೊಂಡಿದ್ದು ಸಿಎಂ ಮತ್ತು ಡಿಸಿಎಂ ಉದ್ಘಾಟಿಸಲಿದ್ದಾರೆ. ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕೆ ಪಾಲಕರು ಒತ್ತು ನೀಡಬೇಕು ಎಂದರು.
ಇದಕ್ಕೂ ಮೊದಲು ಉತ್ತಂಬಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರು, ಚಾಮರಾಜನಗರ ವೃತ್ತದಲ್ಲಿ ಅಳವಡಿಸಿದ್ದ ಭಗೀರಥ ಸರ್ಕಲ್ ನಾಮಫಲಕವನ್ನು ಶಾಸಕರು ಅನಾವರಣಗೊಳಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ರಮೇಶ್, ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಶಿವಕುಮಾರ್, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ರೇಚಣ್ಣ, ಕಂದಹಳ್ಳಿ ನಂಜುಂಡಸ್ವಾಮಿ, ನಗರಸಭೆ ಮಾಜಿ ಸದಸ್ಯ ಮಂಜುನಾಥ್ ಗ್ರಾಮದ ಯಜಮಾನರು, ಮುಖಂಡರು ಇದ್ದರು.