ಚಾಮರಾಜನಗರ ತಾಲೂಕಿನ ಬಿಸಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ ಶಿವಬಸಪ್ಪ ಮತ್ತು ಉಪಾಧ್ಯಕ್ಷ ನಾಗರಾಜು ಅವರನ್ನು ಅಭಿನಂದಿಸಲಾಯಿತು. ಬಿ.ಬಿ.ನಾಗರಾಜು, ಸಿ.ರಾಜಶೇಖರ್, ಬಸವಣ್ಣ, ಬಿ.ಶಿವಬಸಪ್ಪ, ಮಹೇಶ್, ಮಹದೇವಸ್ವಾಮಿ, ರಾಚಶೆಟ್ಟಿ, ರಾಚನಾಯಕ, ರವಿ, ರೂಪಾ ಶಾಂತಮಲ್ಲಪ್ಪ, ಮಂಜುಳಾ ರಾಜು ಇದ್ದರು.  
ಚಾಮರಾಜನಗರ

ಬಿಸಲವಾಡಿ ಡೇರಿ ಅಧ್ಯಕ್ಷರಾಗಿ ಶಿವಬಸಪ್ಪ ಆಯ್ಕೆ

ಚಾಮರಾಜನಗರ : ತಾಲೂಕಿನ ಬಿಸಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಡಳಿತ ಮಂಡಲಿಗೆ ಬಿಜೆಪಿ ಬೆಂಬಲಿತ ಶಿವಬಸಪ್ಪ ಅಧ್ಯಕ್ಷರಾಗಿ ಹಾಗೂ ನಾಗರಾಜು ಉಪಾಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದ ಡೇರಿಯ ಅಧ್ಯಕ್ಷ-ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದ ಕಾರಣದಿಂದ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಬಸಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜು ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧೀಕ್ಷಕ ನಾಗೇಶ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಶಿವಬಸಪ್ಪ ಮಾತನಾಡಿ, ಎಲ್ಲ ನಿರ್ದೇಶಕರು ಒಮ್ಮತದಿಂದ ಅವಿರೋಧವಾಗಿ ನಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ರೈತರ ಅಭಿವೃದ್ಧಿಗಾಗಿ ಒಕ್ಕೂಟ ಹಾಗೂ ಸರ್ಕಾರ ನೀಡುವ ಎಲ್ಲ ಯೋಜನೆಗಳನ್ನು ಡೇರಿ ಹಂತದಲ್ಲಿ ಜಾರಿಗೊಳಿಸಿ ರೈತರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ನಿರ್ದೇಶಕ ಬಿ.ಬಿ.ನಾಗರಾಜು, ಸಿ.ರಾಜಶೇಖರ್, ಬಸವಣ್ಣ, ಬಿ. ಶಿವಬಸಪ್ಪ, ಮಹೇಶ್, ಮಹದೇವಸ್ವಾಮಿ, ರಾಚಶೆಟ್ಟಿ, ರಾಚನಾಯಕ, ರವಿ, ರೂಪಾ ಶಾಂತಮಲ್ಲಪ್ಪ, ಮಂಜುಳಾ ರಾಜು, ಮುಖ್ಯಕಾರ್ಯ ನಿರ್ವಾಕರಾದ ಮಹೇಶ್, ಹಾಲು ಪರೀಕ್ಷಕ ಮಹದೇವಸ್ವಾಮಿ, ಗುಮಾಸ್ತ ಮಹೇಂದ್ರ, ಸಹಾಯಕರಾದ ಗೌತಮ್ , ನಾರಾಯಣಸ್ವಾಮಿ,ಬಿಜೆಪಿ ಮುಖಂಡರಾದ ನಂಜಪ್ಪ, ಶಿವಮಲ್ಲಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಕುಮಾರ್, ಬಾಲರಾಜ್, ಜಿ.ಶಿವಣ್ಣ, ಬಿ.ಸಿ.ರಾಜು, ಮಿಲ್ ಉಮೇಶ್, ವಿಜಯಕುಮಾರ್ ಇತರರಿದ್ದರು.