ಚಿರತೆ  
ಚಾಮರಾಜನಗರ

ಚಿರತೆ ದಾಳಿಗೆ ಕುರಿ ಬಲಿ

ಲೋಕೇಶ್ ಮನು. ಡಿ
ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಲ ಗ್ರಾಮದಲ್ಲಿ ಶನಿವಾರ ಚಿರತೆ ದಾಳಿಗೆ ಕುರಿ ಬಲಿಯಾಗಿದೆ.
ಗ್ರಾಮದ ಪ್ರಸನ್ನ ಎಂಬುವರು ಎಂದಿನಂತೆ ಬೆಳಗ್ಗೆ ಹೊರವಲಯದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಚಿರತೆ ಕುರಿ ಮೇಲೆ ದಾಳಿ ನಡೆಸಿ ತುಸು ದೂರ ಎಳೆದೊಯ್ದು ಸಾಯಿಸಿದೆ.
ಈ ದೃಶ್ಯವನ್ನು ನೋಡಿದ ಪ್ರಸನ್ನ ಗಾಬರಿಗೊಂಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ