ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂವಹನ ಸಮಾರೋಪ ಸಮಾರಂಭದಲ್ಲಿ ಡಾ.ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಎಸ್.ದತ್ತೇಶ್ ಕುಮಾರ್, ಡಾ.ಆರ್.ನಾಗಭೂಷಣ್, ಎ.ಪಿ.ದಿನೇಶ್ ಕುಮಾರ್, ಡಾ. ಜಗ ದೀಶ್, ಡಾ.ಡಿ. ಧನಂಜಯ ಇತರರಿದ್ದರು.  
ಚಾಮರಾಜನಗರ

ವಿದ್ಯಾರ್ಥಿಗಳನ್ನು ಆದರ್ಶ ಪ್ರಜೆಯಾಗಿ ರೂಪಿಸಿ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರಿಗೆ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ
ಕೊಳ್ಳೇಗಾಲ: ವಿದ್ಯಾರ್ಥಿಗಳನ್ನು ಆದರ್ಶ ಪ್ರಜೆಗಳಾಗಿ ರೂಪಿಸುವ ಸಂಕಲ್ಪ ಗುರುಗಳಲ್ಲಿ ಇರಬೇಕೆಂದು ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಬೋಧನಾ ಸುಧಾರಣ ಕಾರ್ಯಗಾರ ಮತ್ತು ಪರಿಣಾಮಕಾರಿ ತರಗತಿ ಬೋಧನೆ ಹಾಗೂ ಇಂಗ್ಲಿಷ್ ಸಂವಹನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಡಾ.ಎಸ್.ದತ್ತೇಶ್ ಕುಮಾರ್ ಅವರು ಮಾನಸ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಗ್ರಾಮೀಣ ಭಾಗದ ಸಾವಿರಾರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದಾರೆ. ಹಿಂದಿನ ಕಾಲದ ಜನರಲ್ಲಿ ಶಿಕ್ಷಣದ ಕೊರತೆ ಇದ್ದರೂ ಕೂಡಿ ಬಾಳುವ ಗುಣವಿತ್ತು. ಆದರೆ ಪ್ರಸ್ತುತ ಸಮಾಜದಲ್ಲಿ ಶಿಕ್ಷಣ ಪಡೆದರೂ ಸ್ವಾರ್ಥ ಗುಣಗಳೇ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಶಿಕ್ಷಕರನ್ನೇ ಬದಿಗೆ ತಳ್ಳಿ ವಿದ್ಯಾರ್ಥಿಗಳು ಅದರ ಗೀಳು ಅಂಟಿಸಿಕೊಳ್ಳು ವಂತಾಗಿದೆ. ಸಾಂಪ್ರದಾಯಿಕ ಶೈಲಿಯ ಶಿಕ್ಷಣವನ್ನು ಪಡೆಯುವಂತಾಗಬೇಕು ಎಂದರು.
ಮಾನಸ ಶಿಕ್ಷಣ ಸಂಸ್ಥೆಯ ಡಾ. ಎಸ್. ದತ್ತೇಶ್ ಕುಮಾರ್, ವಿಶೇಷಾಧಿಕಾರಿ ಡಾ.ಆರ್. ನಾಗ ಭೂಷಣ್,ಎ.ಪಿ.ದಿನೇಶ್ ಕುಮಾರ್, ಪ್ರಾಂಶುಪಾಲ ಡಾ.ಜಗದೀಶ್, ಡಾ.ಡಿ.ಧನಂಜಯ, ಡಿ. ಕೃಷ್ಣೇಗೌಡ, ಮುಖ್ಯ ಶಿಕ್ಷಕಿ ನೈನ ಕ್ಲಾರಿಬೆಲ್ , ಸಹ ಮುಖ್ಯ ಶಿಕ್ಷಕಿ ಗಿರಿಜಾ ಲಕ್ಷ್ಮೀ, ಜನಪರ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮಹೇಶ್ ಇತರರು ಇದ್ದರು