ಮರೂರಿನಲ್ಲಿ ಕಳ್ಳತನ ನಡೆದ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್ಪಿ ಮೋಹನ್ ಇದ್ದರು.
ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಸರಣಿ ಕಳ್ಳತನವಾಗಿದ್ದು, ಬಾಗಿಲಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.
ಗ್ರಾಮದ ಶಿವಮಾದಮ್ಮ, ನಾಗೇಶ್, ಶಿವಣ್ಣ, ಜಗದೀಶ್ ಹಾಗೂ ಕಬ್ಬಾಳಮ್ಮ ಅವರ ಮನೆಗಳಲ್ಲಿ ಕಳ್ಳತನವಾಗಿದೆ. ಈ ಪೈಕಿ ಜಗದೀಶ್, ನಾಗೇಶ್, ಶಿವಣ್ಣ ಹಾಗೂ ಶಿವಮಾದಮ್ಮ ಬೆಂಗಳೂರಿನಲ್ಲಿ ವಾಸವಿದ್ದರೆ, ಕಬ್ಬಾಳಮ್ಮ ಗ್ರಾಮದ ಸಂಬಧಿಕರ ಮನೆಯಲ್ಲಿದ್ದರು. ಯಾರೂ ಇಲ್ಲದಿರುವ ಬಗ್ಗೆ ತಿಳಿದ ಕಳ್ಳರು ಮೂವರ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದಾರೆ. ಇನ್ನೆರೆಡು ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ.
ಡಿವೈಎಸ್ಪಿ ಮೋಹನ್ ಹಾಗೂ ಇನ್‌ಸ್ಪೆಪೆಕ್ಟರ್ ಆನಂದಮೂರ್ತಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಶ್ವಾನದಳ ಹಾಗೂ ಬೆರಳಚ್ಚು ತಂಡ ಪರಿಶೀಲನೆ ನಡೆಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.