ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದ ರೈತ ಶಿವರುದ್ರಪ್ಪ ಅವರ ಜಮೀನಿನಲ್ಲಿ ಬೆಳೆದಿರುವ ಬಾಳೆ
- ಪರಿಸರ ಸ್ನೇಹಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿರುವ ಉಡಿಗಾಲದ ಶಿವರುದ್ರಪ್ಪ
- ತಾಲೂಕಿನ ಉಡಿಗಾಲದ ನಿವಾಸಿ, ಇದೇ ಗ್ರಾಮದ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ಶಿವರುದ್ರಪ್ಪ
ಚಾಮರಾಜನಗರ: ಇವರ ಕೃಷಿ ಕಾಯಕಕ್ಕೆ ಸ್ವಾವಲಂಬನೆಯೇ ತಾಯಿ ಬೇರು..ಪರಿಸರ ಸ್ನೇಹಿ ಚಿಂತನೆಯೇ ತಂತು ಬೇರು..ಮಣ್ಣಿಗೆ ಹೊನ್ನ ರೂಪ ನೀಡಲು ಸುರಿಸುತ್ತಿರುವ ಬೆವರೇ ನಿಜ ದೇವರು..
ತಾಲೂಕಿನ ಉಡಿಗಾಲದ ನಿವಾಸಿ, ಇದೇ ಗ್ರಾಮದ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ವ್ಯವಸ್ಥಾಪಕ ಶಿವರುದ್ರಪ್ಪ ಅವರ ಕೃಷಿ ಕಾಯಕ ವಿಶೇಷ ಅರ್ಥಗಳನ್ನೊಳಗೊಂಡಿದೆ.ಇವರು ತಮ್ಮಡಹಳ್ಳಿ ಬಳಿ 2.37 ಎಕರೆ ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ರಾಸಾಯನಿಕ ಬಳಕೆ ನಿಲ್ಲಿಸಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ.
ಮೊದಲು ಸಾವಯವ ವಿಧಾನದಲ್ಲಿ ಅರಿಶಿಣ ಬೆಳೆದಿದ್ದರು. ಇದಕ್ಕಾಗಿ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಮಾಣ ಪತ್ರವೂ ದೊರೆತಿತ್ತು. ಪ್ರಸ್ತುತ 1.5 ಎಕರೆ ಪ್ರದೇಶದಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಇದರೊಂದಿಗೆ ದಾಳಿಂಬೆ, ಮಾವು, ಹಲಸು, ಡ್ರ್ಯಾಗನ್ ಫ್ರೂಟ್, ಸೀಬೆ, ನೇರಳೆ, ನಿಂಬೆ, ನುಗ್ಗೆ, ಚಕ್ಕೋತ, ನೆಲ್ಲಿಕಾಯಿ, ಸೀತಾಫಲ, ಸಪೋಟ, 180 ತೆಂಗು, 15 ತೇಗದ ಮರಗಳನ್ನು ಬೆಳೆದಿದ್ದಾರೆ.
ರೈತರು ಮೊದಲು ತಮ್ಮ ಸ್ವಂತ ಬಳಕೆಗಾಗಿ ಬೆಳೆ ಬೆಳೆದುಕೊಳ್ಳಬೇಕು ಎನ್ನುವ ಸ್ವಾವಂಬಲನೆ ಇವರ ಮೂಲ ಉದ್ದೇಶವಾಗಿದೆ. ಅಲ್ಲದೇ, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಳೆ ಏರಿಕೆಯಾಗುತ್ತಲೇ ಇದೆ. ರಸಗೊಬ್ಬ, ಕೀಟನಾಶಕ, ಕಳೆ ಔಷಧಿಗಳ ಬೆಲೆಯೂ ಏರುತ್ತಿದೆ. ಇವುಗಳಿಗಾಗಿ ರೈತರು ಹಣವನ್ನು ವ್ಯಯಿಸಬೇಕಾಗುತ್ತಿದೆ. ಹಾಗಾಗಿ ಇದರ ಬದಲು ಸಾವಯವ ವಿಧಾನದಲ್ಲಿ ಕೃಷಿ ಮಾಡುವ ಮೂಲಕ ಸ್ವಾವಲಂಬನೆ ಸಾಧಿಸಬಹುದೆಂದು ರಾಸಾಯನಿಕ ಮುಕ್ತ ಕೃಷಿ ಮಾಡುತ್ತಿದ್ದಾರೆ.
ಜತೆಗೆ ವಿಷ ಮುಕ್ತ ಆಹಾರ ಉತ್ಪಾದನೆಯಾಗಬೇಕೆಂಬ ಕಾರಣಕ್ಕೆ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿದ್ದಾರೆ.
ಇವೆರಡೂ ಆಶಯಗಳೇ ಇವರ ವ್ಯವಸಾಯದ ತಾಯಿ ಬೇರುಗಳಾಗಿದ್ದು, ರಾಸಾಯನಿಕ ಬಳಸಿಯಿಂದ ಮಣ್ಣಿನ ಲವತ್ತೆ ಹಾಳಾಗುತ್ತದೆ. ಭೂಮಿ ಬಂಜರಾಗುತ್ತದೆ. ಇದರ ಬದಲು ಮಣ್ಣಿನ ಲವತ್ತೆಗಾಗಿ ಅನುರಿಸುವ ಸಾವಯವ ವಿಧಾನದಕ್ಕಾಗಿ ಹರಿಸುವ ಬೆವರನ್ನೇ ದೇವರೆಂದ ನಂಬಿದ್ದಾರೆ.
ಹಾನಿ ರಹಿತ ತೋಟದ ದಿವ್ಯ ನೋಟ:
ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವುದು ಹಾನಿ ರಹಿತ ಹಣ್ಣುಗಳ ಬೆಳವಣಿಗೆಗೆ ಕಾರಣವಾಗಿದೆ. ಜೀವಾಮೃತ, ಜೀವಾಣು ಗೊಬ್ಬರಗಳನ್ನು ಹಣ್ಣಿನ ಗಿಡಗಳಿಗೆ ನೀಡುತ್ತಿದ್ದಾರೆ. ಬಾಳೆ ಬೆಳೆ ಉತ್ತಮವಾಗಿ ಬೆಳೆದಿದೆ. ರೋಗಬಾಧೆ ಇಲ್ಲದೆ ಆರೋಗ್ಯಕರವಾಗಿ ಕಾಣುತ್ತದೆ. ಮಣ್ಣಿನ ಪರೀಕ್ಷೆ ಮಾಡಿಸಿ ಅದರ ಪ್ರಕಾರವೇ ಪೋಷಕಾಂಶಗಳನ್ನು ನೀಡಲಾಗುತ್ತಿದೆ. 180 ತೆಂಗಿನ ಮರಗಳು ಕೂಡ ರೋಗ ರುಜಿನವಿಲ್ಲದೆ ಕಾಯಿ ಬಿಡುತ್ತಿವೆ. ಎಳನೀರು ಮಾರಾಟ ಮಾಡದೆ ಕಾಯಿ ಮಾಡಿ ವ್ಯಾಪಾರಕ್ಕೆ ಕೊಡಲಾಗುತ್ತಿದೆ. ದಾಳಿಂಬೆಯ ಗೊಂಚಲು, ಮಾವಿನ ಮರಗಳಲ್ಲಿ ಕಾಯಿ ಕಚ್ಚಿರುವ ಸಲು, ಹೂ ಬಿಟ್ಟಿರುವ ಡ್ರಾೃಗನ್ ್ರೂಟ್, ಬಯಲು ಖಜಾನೆಯಂತೆ ಕಾಣುವ ಎತ್ತರದ ತೇಗ ತೋಟದ ಆಷರ್ಕಣೆಗಳಾಗಿವೆ. ರಾಸಾಯನಿಕ ಬಳಕೆ ಮಾಡದೆ ಬೆಳೆಯುತ್ತಿರುವ ಹಣ್ಣಗಳನ್ನು ರೈತ ಶಿವರುದ್ರಪ್ಪ ಮೊದಲು ತನ್ನ ಮನೆಗೆ ಬಳಕೆ ಮಾಡುತ್ತಾರೆ. ಬಳಿಕ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಇವರಿಗೆ ಬೇರೆ ಎಲ್ಲೋ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ದಲ್ಲಾಳಿಗಳ ಕೈಗಿಡುವ ಪ್ರಮೇಯವೇ ಬರುತ್ತಿಲ್ಲ. ರೈತ ಶಿವರುದ್ರಪ್ಪ ಉಡಿಗಾಲ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ಮ್ಯಾನೇಜರ್ ಆಗಿದ್ದಾರೆ. ಈ ಜವಾಬ್ದಾರಿಯನ್ನೂ ನಿರ್ವಹಣೆ ಮಾಡುತ್ತಿರುವುದರಿಂದ ಕೃಷಿಗೆ ಪತ್ನಿ ಸುಧಾ, ಮಾವ ನಾಗಮಲ್ಲಪ್ಪ ಸಾಥ್ ನೀಡುತ್ತಿದ್ದಾರೆ.
ಕೃಷಿಗೆ ಸಂಬಂಧಿಸಿದ ಜ್ಞಾನ ಹೆಚ್ಚಿಸಿಕೊಳ್ಳಲು ರೈತ ಶಿವರುದ್ರಪ್ಪ ಆಸಕ್ತಿ ಹೊಂದಿದ್ದಾರೆ. ವ್ಯವಸಾಯದ ಮಾಹಿತಿಗಳು, ಸರ್ಕಾರದ ಸೌಲಭ್ಯಗಳು, ಬೇಸಾಯದ ಕ್ರಮಗಳನ್ನು ತಿಳಿದುಕೊಳ್ಳಲು ತರಬೇತಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಚಾಮರಾಜನಗರ ಕೃಷಿ ಇಲಾಖೆ, ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ, ಮೈಸೂರಿನ ನಾಗನಹಳ್ಳಿಯಲ್ಲಿರುವ ಸಾವಯವ ಕೃಷಿ ಸಂಶೋಧನಾ ಕೇಂದ್ರ, ಇಕ್ರಾ ಸಂಸ್ಥೆಗಳು ನೀಡಿರುವ ತರಬೇತಿಗಳಲ್ಲಿ ಶಿವರುದ್ರಪ್ಪ ಪಾಲ್ಗೊಂಡಿದ್ದಾರೆ. ಕೃಷಿಯ ಕುರಿತ ಹೆಚ್ಚಿನ ಅರಿವನ್ನು ಮೂಡಿಸಿಕೊಂಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದ ರೀತಿಯಲ್ಲೇ ರಾಸಾಯನಿಕ ಗೊಬ್ಬರಗಳ ಬೆಲೆಯೂ ಏರಿಕೆಯಾಗುತ್ತಿದೆ. ಇದು ಕೃಷಿಯ ಉತ್ಪಾದನಾ ವೆಚ್ಚವನ್ನು ದುಪ್ಪಟ್ಟು ಮಾಡುತ್ತಿದೆ. ರೈತರಿಗೆ ಲಾಭ ಸಿಗುತ್ತಿಲ್ಲ. ಸಾವಯವ ವಿಧಾನವನ್ನು ಹಂತ ಹಂತವಾಗಿ ಅಳವಡಿಕೆ ಮಾಡಿಕೊಳ್ಳುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಲಾಭವೂ ದೊರೆಯುತ್ತದೆ.
ಶಿವರುದ್ರಪ್ಪ, ರೈತ, ಉಡಿಗಾಲ, ಚಾಮರಾಜನಗರ
ಪರಿಸರ ಉಳಿಸುವ ಒಲವುಳ್ಳ ರೈತ ಶಿವರುದ್ರಪ್ಪ. ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಏರಿಕೆಯಾಗುತ್ತಲೇ ಇದೆ. ಉತ್ತಮ ವಾತಾವರಣಕ್ಕೆ ಪೂರಕವಾಗಿರುವ ಕೃಷಿ ಪದ್ಧತಿಯನ್ನು ಅನುಸರಿಸುವುದು ಚಳವಳಿಯಾಗಬೇಕು. ಈ ನಿಟ್ಟಿನಲ್ಲಿ ಶಿವರುದ್ರಪ್ಪ ಅವರಂತಹ ರೈತರು ಮಾದರಿಯಾಗಿದ್ದಾರೆ.
ಶಿವಲಿಂಗೇಗೌಡ, ಇಕ್ರಾ ಸಂಸ್ಥೆ ಕಾರ್ಯಕರ್ತ