ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಸ್.ಪ್ರಕಾಶ್, ಎನ್.ನಂದಿನಿ, ವೀರೇಂದ್ರ ಗಿರೀಶ್, ಅಂತೋಣಿ ಟಿ.ರಾಜ್, ಸಿ.ಲಿಂಗರಾಜು, ರಾಜೇಶ್ ನಾಯಕ ಇತರರಿದ್ದರು. 
ಚಾಮರಾಜನಗರ

ಆದರ್ಶ ವಿದ್ಯಾಲಯಕ್ಕೆ ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆ

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಸರ್ಕಾರಿ ಆದರ್ಶ ವಿದ್ಯಾಲಯದ 2026-27 ನೇ ಸಾಲಿನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್.ಪ್ರಕಾಶ್, ಉಪಾಧ್ಯಕ್ಷರಾಗಿ ಎನ್.ನಂದಿನಿ ಅವಿರೋಧ ಆಯ್ಕೆಯಾಗಿದ್ದಾರೆ.
ಪಟ್ಟಣದ ಮುಡಿಗುಂಡ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಪ್ರಕಾಶ್ ಮಾತನಾಡಿ, ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷನಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲ ಪಾಲಕರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಗೆ ಸದಸ್ಯರೊಂದಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ, ಶಿಕ್ಷಕರು, ಪಾಲಕರು ಇದ್ದರು
ಪದಾಧಿಕಾರಿಗಳು: ಸದಸ್ಯರಾಗಿ ವೀರೇಂದ್ರ ಗಿರೀಶ್, ಅಂತೋಣಿ ಟಿ.ರಾಜ್, ಸಿ.ಲಿಂಗರಾಜು, ರಾಜೇಶ್ ನಾಯಕ, ಆರ್.ಪರಶಿವ, ವೈ.ಎನ್.ಯೋಗೇಶ್, ಸೋಮಣ್ಣ, ಅಂಜಲಿ ಕುಮಾರ್, ತ್ರಿಪುರಸುಂದರಿ, ಎಸ್.ಶಂಕರಿ, ಲತಾ, ಎನ್.ಸುಷ್ಮಾ, ಕವಿತಾ, ಭಾರತಿ, ರಾಧಾ, ಮಮತಾ ಪ್ರಿಯಾ, ನಾಮ ನಿರ್ದೇಶನ ಸದಸ್ಯರಾಗಿ ಸುರೇಶ್ ಆಯ್ಕೆಯಾಗಿದ್ದಾರೆ.