ಪ್ರಮುಖ ಮುಖ್ಯಾಂಶಗಳು
ಹನೂರು:
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದಾಸೋಹ ಭವನದಲ್ಲಿ ಶನಿವಾರ ಪ್ರಸಾದ ಸ್ವೀಕರಿಸುವ ಸಂಬಂಧ ಭಕ್ತರೊಬ್ಬರ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮೈಸೂರಿನ ಎಚ್.ಬಿ.ಅಶೋಕ್ ಗಾಯಗೊಂಡವರು. ಬೆಳಗ್ಗೆ 11.30ರ ವೇಳೆಯಲ್ಲಿ ಅಶೋಕ್ ಹಾಗೂ ಕುಟುಂಬಸ್ಥರು ಪ್ರಸಾದ ಸ್ವೀಕರಿಸುವ ಸಲುವಾಗಿ ದಾಸೋಹ ಭವನದ ಗೇಟ್ ಬಳಿ ಆಗಮಿಸಿದ್ದು, ಒಳಗಡೆ ಬಿಡುವಂತೆ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಅಶೋಕ್ ನಡುವೆ ಮಾತಿನ ಚಕಮಕಿ ನಡೆದಿದೆ.
ಬಳಿಕ ನಡೆದ ಗಲಾಟೆಯಲ್ಲಿ ಅಶೋಕ್ ತಲೆಗೆ ತೀವ್ರ ಪೆಟ್ಟಾಗಿದ್ದು, ಬೆಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭದ್ರತಾ ಸಿಬ್ಬಂದಿ ಕುಮಾರಸ್ವಾಮಿ, ಮಹೇಶ್ ಹಾಗೂ ದೀಪಕ್ ಕೂಡ ತಮಿಳುನಾಡು ಮೆಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.