ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ವಿಜ್ಞಾನ ಮಾದರಿ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ. ಆರ್.ಎಸ್.ಅಶ್ವಿನಿ, ಡಾ.ಚಿನ್ಮಯ್ ಭಟ್, ಡಾ.ಶಿವಪ್ರಸಾದ್, ಚಂದ್ರಶೇಖರ್, ಲೋಕೇಶ್, ಡಾ.ಮಲ್ಲೇಶ್, ಡಾ.ನೀಲಕಂಠಸ್ವಾಮಿ ಇತರರು ಇದ್ದರು.
- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ
- ವಿದ್ಯಾರ್ಥಿಗಳಿಂದ ಸೃಜನಾತ್ಮಕ ಮಾದರಿಗಳ ತಯಾರಿಕೆ
ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಮತ್ತು ಗಣಿತಶಾಸ ವಿಭಾಗ, ರೆಡ್‌ಕ್ರಾಸ್ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಶುಕ್ರವಾರ ವಿಜ್ಞಾನ ಮಾದರಿ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬಿಎಸ್ಸಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತಾಗಿ ಸೃಜನಾತ್ಮಕ ಮತ್ತು ಮನಮುಟ್ಟುವಂತಹ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಈ ಮಾದರಿಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯುವ ಮೂಲಕ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಎಸ್.ಅಶ್ವಿನಿ ವಹಿಸಿದ್ದರು. ಪ್ರದರ್ಶನದಲ್ಲಿ ಉತ್ತಮ ಮಾದರಿಗಳನ್ನು ಆಯ್ಕೆ ಮಾಡಲು ನಿಸರ್ಗ, ತೇಜಸ್ವಿನಿ ಹಾಗೂ ಕಾವ್ಯ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರಾದ ಡಾ. ಚಿನ್ಮಯ್ ಭಟ್, ಡಾ.ಶಿವಪ್ರಸಾದ್, ಚಂದ್ರಶೇಖರ್, ಲೋಕೇಶ್, ಡಾ. ಮಲ್ಲೇಶ್, ಡಾ.ನೀಲಕಂಠಸ್ವಾಮಿ, ನಾರಾಯಣ, ದೀಪಿತಾ ಹಾಗೂ ಮಹಾದೇವ ಉಪಸ್ಥಿತರಿದ್ದರು.