ಚಾಮರಾಜನಗರ ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದ ಪ್ರೇರಣಾ ವಿದ್ಯಾಸಂಸ್ಥೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಲಾಯಿತು. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
- ಅಂಕನಶೆಟ್ಟಿಪುರದಲ್ಲಿರುವ ಪ್ರೇರಣಾ ವಿದ್ಯಾಸಂಸ್ಥೆಯಲ್ಲಿ ಸಡಗರ
- ವಿದ್ಯಾರ್ಥಿಗಳಿಗೆ ಸುಗ್ಗಿ ಪೂಜೆ, ರೈತರ ಪರಿಶ್ರಮದ ಅರಿವು
ಚಾಮರಾಜನಗರ: ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದಲ್ಲಿರುವ ಪ್ರೇರಣಾ ವಿದ್ಯಾಸಂಸ್ಧೆಯಲ್ಲಿ
ಸಂಕ್ರಾತಿ ಹಬ್ಬವನ್ನು ಮುನ್ನ ದಿನವಾದ ಬುಧವಾರವೇ ಆಚರಣೆ ಮಾಡಲಾಯಿತು.
ಇದೇ ವೇಳೆ ಶಾಲೆಯ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಸಂಕ್ರಾತಿ ಹಬ್ಬದ ಮಹತ್ವ ಸುಗ್ಗಿ ಪೂಜೆ ಮತ್ತು ರೈತರ ಪರಿಶ್ರಮ ಮತ್ತು ಮಕರ ಸಂಕ್ರಾತಿ ಸಮಯದಲ್ಲಿ ಸೂರ್ಯನು ತನ್ನ ಪಥವನ್ನು ಬದಲಿಸುವ ಬಗ್ಗೆ ತಿಳಿಸಿಕೊಟ್ಟರು.
ಮುಖ್ಯಶಿಕ್ಷಕ ಎಚ್.ಜಿ.ಮಹೇಶ್ ಮಾತನಾಡಿ, ಸುಗ್ಗಿ ಋತುವಿನಲ್ಲಿ ಬರುವ ಈ ಹಬ್ಬವನ್ನು ಸುಗ್ಗಿ ಹಬ್ಬ ಎಂದು ಕರೆಯಲಾಗುತ್ತದೆ. ಮಕ್ಕಳು ಹಬ್ಬದ ದಿನ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಹೇಳಿದರು.
ಸಂಕ್ರಾತಿ ಸುಗ್ಗಿ ಹಬ್ಬದ ಮಹತ್ವವನ್ನು ತಿಳಿಸಿಕೊಡುವ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿ ಮಕ್ಕಳಿಗೆ ಸಿಹಿ ಪೊಂಗಲ್ ವಿತರಿಸಲಾಯಿತು. ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.