ಗುಂಡ್ಲುಪೇಟೆ ತಾಲೂಕಿನ ಕರಕಲಮಾದಹಳ್ಳಿಯ ಬಸಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಶ್ರೀ ಗಂಧದ ಮರವನ್ನು ಕತ್ತರಿಸಿರುವುದು.
ಗುಂಡ್ಲುಪೇಟೆ: ತಾಲೂಕಿನ ಕರಕಲಮಾದಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿ ಹೊತ್ತೊಯ್ದಿದ್ದಾರೆ.
ಗ್ರಾಮದ ಬಸಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಸಾವಿರಾರು ರೂ. ಮೌಲ್ಯದ ಶ್ರೀಗಂಧದ ಮರವನ್ನು ದುಷ್ಕರ್ಮಿಗಳು ಕತ್ತರಿಸಿ ಕದ್ದೊಯ್ದಿದ್ದಾರೆ. ಇತ್ತೀಚೆಗೆ ಹುಲಿ, ಚಿರತೆಗಳ ಭೀತಿಯಿಂದ ರೈತರು ರಾತ್ರಿ ಜಮೀನು ಕಾವಲಿಗೆ ಹೋಗದಿರುವುದನ್ನೇ ಅರಿತು ಖದೀಮರು ಶ್ರೀಗಂಧದ ಮರಗಳು, ಕೃಷಿ ಪರಿಕರ, ಮೋಟಾರ್ ಕೇಬಲ್ ಕಳ್ಳತನ ಮಾಡುತ್ತಿದ್ದಾರೆ.
ಆದ್ದರಿಂದ ಪೊಲೀಸರು ಕಳ್ಳರನ್ನು ಪತ್ತೆಹಚ್ಚಿ ಜೈಲಿಗಟ್ಟಬೇಕು ಎಂದು ರೈತರು ಒತ್ತಾಯಿಸಿದ್ದಾರೆ.