ಗುಂಡ್ಲುಪೇಟೆ ಪಟ್ಟಣದ ನಿರ್ಮಲ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನವನ್ನು ಆ.ಕೆ.ಮಧು ಉದ್ಘಾಟಿಸಿದರು. ಮೇರಿ, ಸಿಸ್ಟರ್ ಹೆಡ್ವಿನ, ಸಿಸ್ಟರ್ ಹೆಲೆನ್, ಸುಂದರಮ್ಮ, ಮಧು ಹಾಗೂ ಮಕ್ಕಳು ಇದ್ದರು.
ಗುಂಡ್ಲುಪೇಟೆ: ವಿಜ್ಞಾನ ಹಾಗೂ ಸಂಶೋಧನೆಗಳು ಮಾನವ ವಿಕಾಸಕ್ಕೆ ಪೂರಕವಾಗಿರಬೇಕು ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ಪಟ್ಟಣದ ನಿರ್ಮಲ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಜ್ಞಾನಿ ನೊಬೆಲ್ ಡೈನಮೈಟ್ ಸಂಶೋಧನೆಯಲ್ಲಿ ನಿರತರಾಗಿದ್ದಾಗ ಸ್ಫೋಟಗೊಂಡ ಪರಿಣಾಮ 5 ಜನ ಮೃತಪಟ್ಟಿದ್ದರು. ಆನಂತರ ಅವರು ಜೀವಹಾನಿಯಿಂದ ಮನನೊಂದು ಹಲವು ಕ್ಷೇತ್ರದ ಸಂಶೋಧಕರಿಗೆ ಅದರಿಂದ ಬಂದ ಹಣದಿಂದ ನೊಬೆಲ್ ಪ್ರಶಸ್ತಿ ಕೊಡುತ್ತಿದ್ದಾರೆ. ಮುಂದಿನ ಪ್ರಜೆಗಳಾದ ಶಾಲೆಯ ಮಕ್ಕಳು ತಮ್ಮ ಪ್ರತಿಭೆಯಿಂದ ವಿಜ್ಞಾನ ಮಾದರಿಗಳನ್ನು ಮಾಡಿ ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು.
ಮುಖ್ಯಶಿಕ್ಷಕಿ ಸಿಲಿವಿಯಾ ರೀಟಾ ಲೊಬರ ಮಾತನಾಡಿ, ಥಾಮಸ್ ಆಲ್ವ ಎಡಿಸನ್ ಬಲ್ಬ್ ಕಂಡುಹಿಡಿಯಲು ಹಲವು ಬಾರಿ ಸೋತರೂ ಅದನ್ನು ಕಂಡುಹಿಡಿವ ಛಲಬಿಡಲಿಲ್ಲ. ಆದ್ದರಿಂದ ಮಕ್ಕಳು ಛಲದಿಂದ ಸಾಧಕರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ವಿಜ್ಞಾನ ಮಾದರಿಗಳು ಪ್ರಯೋಗಗಳನ್ನು ಪ್ರದರ್ಶಿಸಲಾಯಿತು. ಮಕ್ಕಳೇ ಇವುಗಳನ್ನು ಮಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಸಿಸ್ಟರ್ ಆರೋಗ್ಯ ಮೇರಿ, ಮುಖ್ಯಸ್ಥರಾದ ಸಿಸ್ಟರ್ ಹೆಡ್ವಿನ, ಸಿಸ್ಟರ್ ಹೆಲೆನ್, ಸಿಆರ್‌ಪಿ ಸುಂದರಮ್ಮ, ಗಣಿತ ಶಿಕ್ಷಕ ಮಧು, ಶಿಕ್ಷಕವೃಂದದವರು ಮಕ್ಕಳು ಹಾಜರಿದ್ದರು.
ಗುಂಡ್ಲುಪೇಟೆ ಪಟ್ಟಣದ ನಿರ್ಮಲ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನವನ್ನು ಆ.ಕೆ.ಮಧು ಉದ್ಘಾಟಿಸಿದರು. ಮೇರಿ, ಸಿಸ್ಟರ್ ಹೆಡ್ವಿನ, ಸಿಸ್ಟರ್ ಹೆಲೆನ್, ಸುಂದರಮ್ಮ, ಮಧು ಹಾಗೂ ಮಕ್ಕಳು ಇದ್ದರು.