ಕೊಳ್ಳೇಗಾಲ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ಕೆ.ಕೃಷ್ಣ, ಎ.ಪಿ ದಿನೇಶ್ ಕುಮಾರ್, ಡಾ.ಬಿ.ಧನಂಜಯ, ಡಿ.ಕೃಷ್ಣೇಗೌಡ ಇದ್ದರು.
- ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ
ಕೊಳ್ಳೇಗಾಲ: ಮಾನಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಂಡ್ಯ ಜಿಲ್ಲೆಯ ಭಾರತಿ ನಗರದ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಬಿ.ಕೆ.ಕೃಷ್ಣ ಧ್ವಜಾರೋಹಣ ನೆರವೇರಿಸಿದರು. ವೇದಿಕೆ ಮೇಲಿದ್ದ ಗಣ್ಯರು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಭಾರತಿ ನಗರದ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಬಿ.ಕೆ.ಕೃಷ್ಣ ಮಾತನಾಡಿ, ಭಾರತದಲ್ಲಿ ನಾವೆಲ್ಲರೂ ಜನ್ಮ ತಾಳಿರುವುದಕ್ಕೆ ಧನ್ಯರು. ವಿಶ್ವದ 250 ರಾಷ್ಟ್ರಗಳಲ್ಲಿ ಭಾರತದಲ್ಲಿ ವಾಸಿಸುತ್ತಿರುವ ಜನರಿಗೆ ಇರುವಷ್ಟು ರಕ್ಷಣೆ ನೆಮ್ಮದಿ ಬೇರೆ ಯಾವ ದೇಶದ ಜನರಿಗೂ ಇಲ್ಲ. ಭಾರತ ಸಂವಿಧಾನ ಎಂದು ನಮಗೆ ಸುಖ, ಸಂತೋಷದಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ. ಮೂಲಭೂತ ಹಕ್ಕು ಮತ್ತು ಸವಲತ್ತುಗಳು ದೇಶದ ಪ್ರತಿ ಹೆಜ್ಜೆಗೂ ಲಭಿಸಲು ಸಂವಿಧಾನ ಮೂಲಾಧಾರವಾಗಿದೆ. ವಿದೇಶದ ಸಂವಿಧಾನಗಳನ್ನೆಲ್ಲ ಅಭ್ಯಾಸಿಸಿ ಭಾರತ ಸಂವಿಧಾನವನ್ನು ರಚಿಸಿ ಅಂಬೇಡ್ಕರ್ ಅವರು ದೇಶಕ್ಕೆ ಸಮರ್ಪಿಸಿದ್ದಾರೆ. ಈ ದೇಶದ ತ್ಯಾಗ ಬಲಿದಾನದ ಮಹಾತ್ಮರ ಆಶಯಗಳು ಸಾರ್ಥಕವಾಗಬೇಕಾದರೆ ನಾವೆಲ್ಲರೂ ಏಕತೆಯಿಂದ ಬದುಕಬೇಕು ಎಂದರು.
ಮಾನಸ ಶಿಕ್ಷಣ ಸಂಸ್ಥೆಯ ವಿಶೇಷ ಅಧಿಕಾರಿ ಎ.ಪಿ.ದಿನೇಶ್ ಕುಮಾರ್, ನಿಸರ್ಗ ಕಾಲೇಜು ಆಫ್ ಮ್ಯಾನೇಜ್ಮೆಂಟ್ ಪ್ರಾಚಾರ್ಯ ಡಾ.ಬಿ.ಧನಂಜಯ, ನಿಸರ್ಗ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಕೃಷ್ಣೇಗೌಡ, ನಿಸರ್ಗ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ನೈನ ಕ್ಲ್ಯಾರಿಬೆಲ್, ಮುಖ್ಯ ಶಿಕ್ಷಕ ಶಂಕರ್ ಇತರರು ಇದ್ದರು.