ಗುಂಡ್ಲುಪೇಟೆ ಪಟ್ಟಣದ ಮದ್ದಾನೇಶ್ವರ ಶಾಲೆಯ ಹಿಂಭಾಗ ನಿರ್ಮಾಣವಾಗುತ್ತಿದ್ದ ಶೆಡ್ ಹಾಗೂ ತೆರವುಗೊಳಿಸಿದ ಸ್ಥಳದಲ್ಲಿ ಕರ್ನಾಟಕ ಸೇನೆ ಸಂಘಟನೆಯ ಪದಾದಿಕಾರಿಗಳು ಇದ್ದಾರೆ.
ಗುಂಡ್ಲುಪೇಟೆ: ಪಟ್ಟಣದ ಮದ್ದಾನೇಶ್ವರ ಶಾಲೆಯ ಹಿಂಭಾಗ ಖಾಸಗಿ ವ್ಯಕ್ತಿಗಳು ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಅನ್ನು ತೆರವುಗೊಳಿಸುವಂತೆ ಮನವಿ ಕೊಟ್ಟಿದ್ದರೂ ಸುಮ್ಮನಿದ್ದ ಪುರಸಭೆ ಅಧಿಕಾರಿಗಳು ಕನ್ನಡ ಸಂಘಟನೆಯ ಪ್ರತಿಭಟನೆ ಎಚ್ಚರಿಕೆ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ.
ಮದ್ದಾನೇಶ್ವರ ಶಾಲೆಯ ಹಿಂಭಾಗ ಖಾಸಗಿ ವ್ಯಕ್ತಿಗಳು ರಸ್ತೆಯ ನಡುವೆ ಶೆಡ್ ನಿರ್ಮಿಸುತ್ತಿರುವ ಬಗ್ಗೆ ಕರ್ನಾಟಕ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಸುರೇಶ್‌ನಾಯ್ಕ, ತಾಲೂಕು ಅಧ್ಯಕ್ಷ ಶ್ರೀನಿವಾಸನಾಯ್ಕ ಹಾಗೂ ಪದಾಧಿಕಾರಿಗಳು ಬುಧವಾರ ಪುರಸಭೆ ಕಚೇರಿಗೆ ತೆರಳಿ ಅಧಿಕಾರಿಗಳ ಗಮನಕ್ಕೆ ತಂದರು. ಆದರೆ ಅಧಿಕಾರಿಗಳು ಇದನ್ನು ತಡೆಗಟ್ಟುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿದ್ದರು.
ಇದರಿಂದ ಬೇಸತ್ತ ಸಂಘಟನೆಯವರು ಗುರುವಾರ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮ ಶೆಡ್ ತೆರವುಗೊಳಿಸಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ಮದ್ದಾನೇಶ್ವರ ಶಾಲೆಯ ಹಿಂಭಾಗ ನಿರ್ಮಾಣವಾಗುತ್ತಿದ್ದ ಶೆಡ್ ಹಾಗೂ ತೆರವುಗೊಳಿಸಿದ ಸ್ಥಳದಲ್ಲಿ ಕರ್ನಾಟಕ ಸೇನೆ ಸಂಘಟನೆಯ ಪದಾದಿಕಾರಿಗಳು ಇದ್ದಾರೆ.