ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ರಾಮಲಿಂಗೇಶ್ವರ ದೇವರ ಸಂಪ್ರೋಕ್ಷಣೆ ಮತ್ತು ಕಳಸಾರೋಹಣವನ್ನು ಪಡಗೂರು ಶಿವಲಿಂಗೇಂದ್ರಸ್ವಾಮೀಜಿ ನೆರವೇರಿಸಿದರು.  
ಚಾಮರಾಜನಗರ

ಹೊನ್ನೇಗೌಡನಹಳ್ಳಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಅಭಿನಯ್ ಎಚ್.ಎಂ
ಗುಂಡ್ಲುಪೇಟೆ: ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ಗುರುವಾರ ರಾಮಲಿಂಗೇಶ್ವರ ದೇವರ ಸಂಪ್ರೋಕ್ಷಣೆ ಮತ್ತು ಕಳಸಾರೋಹಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡವು.
ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಏ.23 ರ ಬೆಳಗಿನ ಜಾವ 4.30 ರಲ್ಲಿ ಪಡುಗೂರು ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಹೊನ್ನೇಗೌಡನಹಳ್ಳಿ, ಕಣ್ಣೇಗಾಲ, ಬೇರಂಬಾಡಿ, ಗೋಪಾಲಪುರ ಇತರೆ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಹೊನ್ನೇಗೌಡನಹಳ್ಳಿ ಗುರುಮಠದ ವೀರಣ್ಣಾರಾಧ್ಯ, ವಡ್ಡಗೆರೆಮಲ್ಲರಾಧ್ಯರು, ಸೋಮಹಳ್ಳಿ ಸಿದ್ದಮಲ್ಲಸ್ವಾಮೀಜಿ, ಹಂಗಳ ಹಳ್ಳದ ಮಠದ ಜಡೇಸ್ವಾಮೀಜಿ, ಮಾದಾಪಟ್ಟಣ ಮಠದ ತೋಂಟದಾರ್ಯಸ್ವಾಮೀಜಿ, ಮೂಡುಗೂರು ವಿರಕ್ತಮಠದ ಇಮ್ಮಡಿ ಉದ್ದಾನಸ್ವಾಮೀಜಿ, ಕಬ್ಬಹಳ್ಳಿ ಗುರುಸಿದ್ದ ಸ್ವಾಮೀಜಿ, ಗೋಪಾಲಪುರ ಕಬ್ಬಿಣಕೋಲೇಶ್ವರ ಮಠದ ಗಂಗಾಧರ ಸ್ವಾಮೀಜಿ, ಹಂಗಳ ಪಟ್ಟದ ಮಠದ ಷಡಕ್ಷರಿ ಸ್ವಾಮೀಜಿ, ದೇಪಾಪುರ ಮಠದ ಬಸವಣ್ಣ ಸ್ವಾಮೀಜಿ, ಗೋಪಾಲಪುರ ಸಿದ್ದೇಶ್ವರಸ್ವಾಮೀಜಿ ಪಾಲ್ಗೊಂಡು ಆಶೀರ್ವದಿಸಿದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಹೊನ್ನೇಗೌಡನಹಳ್ಳಿ ಗ್ರಾಮಸ್ಥರು ಮತ್ತು ಯುವಕರು ಹಾಜರಿದ್ದರು.