ಕೊಳ್ಳೇಗಾಲ ಪಟ್ಟಣದ ನಾಯಕರ ದೊಡ್ಡ ಬೀದಿ ಯ ಚಾವಡಿಯಲ್ಲಿ ಶ್ರೀ ರಾಮನವಮಿ ಹಿನ್ನಲೆ ಸಾರ್ವಜನಿಕರಿಗೆ ಮಜ್ಜಿಗೆ ಪಾನಕ ಕೋಸಂಬರಿ ವಿತರಣೆ ಮಾಡಲಾಯಿತು. 
ಚಾಮರಾಜನಗರ

ಶ್ರದ್ಧಾಭಕ್ತಿಯಿಂದ ರಾಮ ನವಮಿ ಆಚರಣೆ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ವಿವಿಧೆಡೆ ಮಜ್ಜಿಗೆ, ಪಾನಕ ವಿತರಣೆ
ಕೊಳ್ಳೇಗಾಲ: ತಾಲೂಕಿನ ವಿವಿಧೆಡೆ ಶುಕ್ರವಾರ ಶ್ರೀರಾಮ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ನಾಯಕರ ದೊಡ್ಡ ಬೀದಿಯ ಚಾವಡಿಯಲ್ಲಿ ನಿವಾಸಿಗಳಾದ ಚಿಕ್ಕಮಾದು, ಸುರೇಂದ್ರ ಮತ್ತು ತಂಬಡಿಗಳು ರಾಮನವಮಿ ಪ್ರಯುಕ್ತ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಭಕ್ತರಿಗೆ ಮಜ್ಜಿಗೆ, ಪಾನಕ ಮತ್ತು ಕೋಸಂಬರಿ ವಿತರಿಸಿದರು.
ದೇವರ ಮಹರ್ಷಿ ವೃತ್ತದಲ್ಲಿ ನಾಗಮಂಟಪ ಸೇವಾ ಸಮಿತಿ 37 ವರ್ಷಗಳಿಂದ ರಾಮನವಮಿ ಆಚರಣೆ ಮಾಡುತ್ತಿದ್ದು, ಮುಖಂಡರಾದ ರವಿ ಬಾಬು, ಪ್ರಕಾಶ್, ಗೋವಿಂದರಾಜು, ವಿಜಯಕುಮಾರ್ ಹಾಗೂ ಬಾಲಣ್ಣ ತಂಡ ಮಜ್ಜಿಗೆ, ಪಾನಕ ಮತ್ತು ಕೋ ಸಂಬರಿ ವಿತರಿಸಿದರು.
ಕಾವೇರಿ ರಸ್ತೆಯಲ್ಲಿರುವ ರಾಮಮಂದಿರದಲ್ಲಿ ರಾಮ ಭಜನಾ ಸಭಾಭವನದ ಪದಾಧಿಕಾರಿಗಳು ಹಾಗೂ ವೀರಾಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ಟಿವಿಎಸ್ ರಾಘವನ್ ಅವರು ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು. ಪಟ್ಟಣದ ಗರಡಿ ಬೀದಿ, ನಾರಾಯಣ ಗುರುಗಳ ವೃತ್ತ, ದೇವಾಂಗ ಪೇಟೆ ನಾಯಕರ ದೊಡ್ಡ ಬೀದಿ, ವಾಲ್ಮೀಕಿ ವೃತ್ತ, ಪಂಚರಂಗಿ ವೃತ್ತ, ಗರಡಿ ಬೀದಿ, ಮುನೇಶ್ವರ ಸ್ವಾಮಿ ದೇವಸ್ಥಾನ ಗುಡಿ ಬೀದಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭಕ್ತರಿಗೆ ಮಜ್ಜಿಗೆ, ಪಾನಕ ಮತ್ತು ಕೋಸಂಬರಿ ವಿತರಣೆ ಮಾಡಲಾಯಿತು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪದಾಧಿಕಾರಿಗಳು ವಿವಿಧ ಕಡೆಗಳಲ್ಲಿ ಸೇವಾ ಕಾರ್ಯಗಳನ್ನು ನೆರವೇರಿಸಿದರು.