ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಿಜಗುಣರಾಜು ಮಾತನಾಡಿದರು. ಗೀತಾ ಬಸವರಾಜು, ಡಿ.ಶ್ವೇತಾ, ಡಾ.ಸುರೇಶ್, ಸಜಿತಾ ಸತೀಶ್, ಡಾ.ಸುಧಾಕರ್, ಡಾ.ಚಿದಾನಂದ್, ಡಾ.ಶಿವರಾಮಯ್ಯ ಇದ್ದರು.
- ರೇಡಿಯಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಿಜಗುಣರಾಜು ಮಾಹಿತಿ
- ಶ್ರೀಶಿವಕುಮಾರಸ್ವಾಮೀಜಿ ಪುತ್ಥಳಿ ಅನಾವರಣ
- ಗುಂಡ್ಲುಪೇಟೆ ತಾಲೂಕಿನ ದೊಡ್ಡ ತುಪ್ಪೂರು ಬಳಿ ಇರುವ ಶಾಲೆ
ಚಾಮರಾಜನಗರ: ರೇಡಿಯಂಟ್ ಸ್ಕೂಲ್ ಆಫ್ ಎಕ್ಸಲೆನ್ಸ್, ರೇಡಿಯಂಟ್ ಪಿಯು ಕಾಲೇಜು ಹಾಗೂ ರೇಡಿಯಂಟ್ ಅಕಾಡೆಮಿಯ ಉದ್ಘಾಟನಾ ಸಮಾರಂಭವನ್ನು ಜ.25 ರಂದು ಹಮ್ಮಿಕೊಳ್ಳಲಾಗಿದೆ ಎಂದು ರೇಡಿಯಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಿಜಗುಣರಾಜು ತಿಳಿಸಿದರು.
ಗುಂಡ್ಲುಪೇಟೆ ತಾಲೂಕಿನ ದೊಡ್ಡ ತುಪ್ಪೂರು ಬಳಿಯಲ್ಲಿ ನಿರ್ಮಿಸಿರುವ ರೇಡಿಯಂಟ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಿದ್ಧಗಂಗಾಮಠದ ಶ್ರೀಡಾ.ಶಿವಕುಮಾರಸ್ವಾಮೀಜಿ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ. ಶ್ರೀಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಅವರು ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀಕ್ಷೇತ್ರ ಕನಕಗಿರಿಯ ಶ್ರೀಭುವನಕೀರ್ತಿ ಭಟ್ಟಾರಕಸ್ವಾಮೀಜಿ ಸಾನಿಧ್ಯ ವಹಿಸುವರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಟಿ.ರವಿ, ಶಾಸಕರಾದ ಎಚ್.ಎಂ.ಗಣೇಶ್‌ಪ್ರಸಾದ್, ಬಿ.ಪಿ.ಶ್ರೀವತ್ಸ, ಎಚ್.ಕೆ.ಸುರೇಶ್, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಬೆಳ್ಳಿ ಪ್ರಕಾಶ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹಿತಿ ನೀಡುವರು.
ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಅನುಭವವುಳ್ಳ ಶಿಕ್ಷಕರಿದ್ದು, ಪೂರ್ವ ಪ್ರಾಥಮಿಕ ತರಗತಿಗಳಿಂದ ದ್ವಿತೀಯ ಪಿಯುಸಿ ವರೆಗೂ ಶಿಕ್ಷಣವನ್ನ ನೀಡಲಾಗುವುದು. ಪ್ರಪ್ರಥಮವಾದ ಕೊಠಡಿ ಗ್ರಂಥಾಲಯ ಹಾಗೂ ವಸತಿ ಸಹಿತ ಶಿಕ್ಷಣದ ವ್ಯವಸ್ಥೆಯನ್ನು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲ್ಪಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಸಲಹೆಗಾರರಾದ ಗೀತಾ ಬಸವರಾಜು, ಸಂಸ್ಥೆಯ ಕಾರ್ಯದರ್ಶಿ ಡಿ.ಶ್ವೇತಾ, ಡೀನ್ ಡಾ.ಸುರೇಶ್, ಪ್ರಾಂಶುಪಾಲರಾದ ಸಜಿತಾ ಸತೀಶ್, ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಸುಧಾಕರ್, ಡಾ.ಚಿದಾನಂದ್, ಡಾ.ಶಿವರಾಮಯ್ಯ ಹಾಜರಿದ್ದರು.