ಯಳಂದೂರು ಸಮೀಪದ ಸಂತೆಮರಹಳ್ಳಿ ಕಬಿನಿ ಕಾಲುವೆಯಲ್ಲಿ ಗುರುವಾರ ಕಂಡು ಬಂದ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದಿರುವುದು.  
ಚಾಮರಾಜನಗರ

ಸಂತೆಮರಹಳ್ಳಿಯಲ್ಲಿ ಹೆಬ್ಬಾವು ರಕ್ಷಣೆ

ಮಾದೇಶ್ ತಿ.ನರಸೀಪುರ
ಯಳಂದೂರು: ಸಮೀಪದ ಸಂತೆಮರಹಳ್ಳಿ ಗ್ರಾಮದ ಕಬಿನಿ ಕಾಲುವೆ ಬಳಿ ಗುರುವಾರ ಕಾಣಿಸಿಕೊಂಡ ಭಾರಿ ಗಾತ್ರದ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದಿದ್ದಾರೆ.
ಬಸವಟ್ಟಿ ಗ್ರಾಮದ ಬರ್ನಾಲ್ಡ್ ದೀಕ್ಷಿತ್ ಮಾಹಿತಿ ಆಧರಿಸಿ ಸ್ನೇಕ್ ಮಂಜು ಜತೆ ಕಡಿದಾದ ಕಾಲುವೆಗೆ ಇಳಿದು ಸುರಕ್ಷಿತವಾಗಿ ಹಿಡಿದಿದ್ದಾರೆ. 6 ತಿಂಗಳ ಹಿಂದೆಯೂ ಸಮೀಪದ ಕಾವುದವಾಡಿ ಬಾಳೆ ತೋಟದಲ್ಲಿ ಈ ಪ್ರಭೇದದ ಹಾವು ಸಿಕ್ಕಿತ್ತು. ಇದು ಕಾಲುವೆ ನೀರಿನ ಮೂಲಕ ಬಂದಿರುವ ಸಂಶಯವಿದೆ. ಹೆಬ್ಬಾವಿನ ಸಂತತಿ ಕಡಿಮೆಯಾಗುತ್ತಿದ್ದು ಯಾರೂ ಸಾಯಿಸದೆ ರಕ್ಷಿಸಬೇಕು ಎಂದು ಮನವಿ ಮಾಡಿದರು. ಹೆಬ್ಬಾವನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಮೀಪದ ಬಿಳಿಗಿರಿರಂಗನಬೆಟ್ಟದ ಕಾಡಿಗೆ ಬಿಡಲಾಗುವುದು ಎಂದು ಮಾಹಿತಿ ನೀಡಿದರು.